ಮತ್ತೆ ಆರು ಟೋರಸ್ ಲಾರಿ, ಸುಮೋ ವಶ: ಮೂವರು ಚಾಲಕರ ಸೆರೆ

0
39

ಕಾಸರಗೋಡು: ಹೊಯ್ಗೆ ಮಾಫಿಯಾಗಳ ವಿರುದ್ಧ ಪೊಲೀ ಸರು ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು  ನಿರ್ಧರಿಸಿದ್ದಾರೆ.

ನಿನ್ನೆ ರಾತ್ರಿ ಹಾಗೂ ಇಂದು ಮುಂಜಾನೆ ಹೊಯ್ಗೆ ಸಾಗಿಸುತ್ತಿದ್ದ ಆರು ಟೋರಸ್ ಲಾರಿಗಳನ್ನು ಹಾಗೂ ಒಂದು ಸುಮೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಮೂವರು ಚಾಲಕರನ್ನು ಬಂಧಿಸಲಾಗಿದೆ. ಐದು ಮಂದಿ ಲಾರಿ ಉಪೇಕ್ಷಿಸಿ ಪರಾರಿಯಾಗಿದ್ದಾರೆ.

ಭೀಮನಡಿ ಕುನ್ನುಂಗೈಯ ಶ್ರೀನಿವಾಸನ್ (೩೨), ಕೊಲ್ಲಂ ಚಾತನ್ನೂರಿನ ರಾಜೇಂದ್ರನ್ (೬೦) ಎಂಬಿವರು ಸೆರೆಗೀಡಾದ ಚಾಲಕರಾಗಿದ್ದಾರೆ.

ಇಂದು ಮುಂಜಾನೆ ನಾಲ್ಕು ಗಂಟೆಗೆ ಮೊಗ್ರಾಲ್ ಸೇತುವೆ ಬಳಿಯಿಂದ ಗೋಣಿಚೀಲದಲ್ಲಿ  ಹೊಯ್ಗೆ ತುಂಬಿಸಿ ಸಾಗಿಸುತ್ತಿದ್ದ ಸುಮೋವನ್ನು ವಶಪಡಿಸಲಾಗಿದೆ. ಮೊಗ್ರಾಲ್ ರಹ್ಮತ್‌ನಗರದ ಶಂಸಿರ್ (೨೩)ನನ್ನು ಬಂಧಿ ಲಾಗಿದೆ.

ನಿನ್ನೆ ರಾತ್ರಿ ಎರಿಯಾಲ್, ಕರಂದಕ್ಕಾಡ್, ಹೊಸ ಬಸ್ ನಿಲ್ದಾಣ ಎಂಬಿಡೆಗಳಲ್ಲಿ ನಡೆಸಿದ  ವಾಹನ ತಪಾಸಣೆಗಳಲ್ಲಿ ಸಿಐ ಅಬ್ದುಲ್ ರಹೀಂ ಆರು ಟೋರಸ್ ಲಾರಿಗಳನ್ನು ವಶಪಡಿಸಿದ್ದಾರೆ. ಹೊಯ್ಗೆ ಮಾಫಿಯಾಗಳ ವಿರುದ್ಧ ಪೊಲೀಸರು ಕ್ರಮ ತೀವ್ರಗೊಳಿಸಿದ್ದು ಕಡವುಗಳನ್ನು ಕೇಂದ್ರೀಕರಿಸಿ ವ್ಯಾಪಕ ದಾಳಿ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. 

NO COMMENTS

LEAVE A REPLY