ತೋರಣ ಕಟ್ಟುವ ವಿಷಯದಲ್ಲಿ ಘರ್ಷಣೆ: ಓರ್ವನಿಗೆ ಗಾಯ

0
43

ಎಡನೀರು: ಎಡನೀರು ಮಠದ ಬಳಿ ರಸ್ತೆಯಲ್ಲಿ ತೋರಣ ನಿರ್ಮಿಸುವ ವಿಷಯದಲ್ಲಿ ಉಂಟಾದ ಘರ್ಷಣೆಯಲ್ಲಿ ಯುವಕನೋರ್ವ ಗಾಯಗೊಂಡ ಘಟನೆ ನಡೆದಿದೆ.

ಎಡನೀರು ಅಮ್ಮಂಗಯ ನಿವಾಸಿ ಶಿವಪ್ರಸಾದ್ ಕೆ.(೨೫) ಎಂಬಾತ ಘರ್ಷಣೆಯಲ್ಲಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಆತ ನೀಡಿದ ದೂರಿನಂತೆ ಸುಕುಮಾರನ್, ರಾಜೇಶ್, ನಿತೀಶ್, ರತೀಶ್, ದಯಾನಂದ ಮೊದಲಾದವರ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಎಡನೀರು ಕ್ಷೇತ್ರ ಉತ್ಸವದಂಗವಾಗಿ ಫೆ. ೧೩ರಂದು ರಾತ್ರಿ ತಾನು ಮಠದ ಎದುರುಗಡೆ ರಸ್ತೆಯಲ್ಲಿ ತಳಿರುತೋರಣ ಕಟ್ಟುತ್ತಿದ್ದ ವೇಳೆ ಒಂದು ತಂಡ ತನ್ನ ಮೇಲೆ ಎರಗಿ ಹಲ್ಲೆಗೊಳಿಸಿದೆಯೆಂದು ಗಾಯಾಳು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಇದೇ ಪರಿಸರದಲ್ಲಿ ಸಿಪಿಎಂನ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿ ಅಲಂಕರಿಸಿತ್ತು. ಅದರ ಬಳಿಯಲ್ಲಿ ತಾನು ತೋರಣ ಕಟ್ಟಲೆತ್ನಿಸಿದ ವೇಳೆ ತನ್ನ ಮೇಲೆ ಹಲ್ಲೆ ನಡೆಸಲಾಯಿತೆಂದು ಗಾಯಾಳು ದೂರಿದ್ದಾರೆ.

NO COMMENTS

LEAVE A REPLY