ಕೆ.ಎಸ್.ಆರ್.ಟಿ.ಸಿ ಬಸ್ ಢಿಕ್ಕಿ ಹೊಡೆದು ಯುವಕ ಮೃತ್ಯು

0
92

ಮಂಜೇಶ್ವರ: ಕೆ.ಎಸ್.ಆರ್.ಟಿ.ಸಿ ಬಸ್ ಢಿಕ್ಕಿ ಹೊಡೆದು ಯುವಕ ಮೃತಪಟ್ಟ ಘಟನೆ ಸಂಭವಿಸಿದೆ.

ಮಂಜೇಶ್ವರ ಮಲ್ಲುಗುರಿ ನಿವಾಸಿ ದಿ|ಭಾಸ್ಕರ ಎಂಬವರ ಪುತ್ರ ಮಹೇಶ್ (೩೪) ಮೃತ ದುರ್ದೈವಿ. ನಿನ್ನೆ ರಾತ್ರಿ ೮ ಗಂಟೆಗೆ ಮೇಲಿನ ತಲಪಾಡಿಯಲ್ಲಿ ಅಪಘಾತವುಂಟಾಗಿದೆ. ಇಲೆಕ್ಟ್ರೀಶಿ ಯನ್ ಆಗಿರುವ ಮಹೇಶ್ ನಿನ್ನೆ ಸಂಜೆ ಕೆಲಸ ಮುಗಿಸಿ ತಲಪಾಡಿಗೆ ತಲುಪಿದ್ದರು. ಬಳಿಕ ಮೇಲಿನ ತಲಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಡ್ಡ ದಾಟುತ್ತಿದ್ದಾಗ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಬಸ್ ಢಿಕ್ಕಿ ಹೊಡೆದಿದೆ. ತಲೆಗೆ ಗಂಭೀರ ಗಾಯಗೊಂಡ ಮಹೇ ಶ್‌ರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿ ತುರ್ತು ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಇಂದು ಮರಣೋ ತ್ತರ ಪರೀಕ್ಷೆಯ ಬಳಿಕ ಸ್ವ-ಗೃಹಕ್ಕೆ ತಲುಪಿಸಿ ಮಂಜೇಶ್ವರ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು. ಮೃತರು ತಾಯಿ ಲಲಿತ, ಸಹೋದರಿ ಮಮತ ಮೊದಲಾ ದವ ರನ್ನು ಅಗಲಿದ್ದಾರೆ. ಅಪಘಾತ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY