ಪೈಂಟಿಂಗ್ ಕಾರ್ಮಿಕ ಕಟ್ಟಡದಿಂದ ಬಿದ್ದು ಮೃತ್ಯು

0
58

ಕಾಸರಗೋಡು: ಪೈಂಟಿಂಗ್ ಕಾರ್ಮಿಕನಾದ ಉತ್ತರಪ್ರದೇಶ ನಿವಾಸಿ ಕಟ್ಟಡದ ಮೇಲಿನಿಂದ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಉತ್ತರಪ್ರದೇಶದ ಗೋರಖ್ ಪುರ ನಿವಾಸಿಯೂ ವಿದ್ಯಾನಗರ ಬಳಿಯ ಪನ್ನಿಪ್ಪಾರದಲ್ಲಿ ವಾಸಿಸುವ ರಾಜು (೩೬) ಎಂಬವರು ಮೃತ ವ್ಯಕ್ತಿ. ರಬೀಂದ್ರ-ಧನ್ಯಶ್ರೀ ದಂಪ ತಿಯ ಪುತ್ರನಾದ ಇವರು ಕಾಸರ ಗೋಡು ಆಸುಪಾಸಿನಲ್ಲಿ ಪೈಂಟಿಂಗ್ ಕೆಲಸ ನಿರ್ವಹಿಸುತ್ತಿ ದ್ದರು. ನಿನ್ನೆ ರಾತ್ರಿ ಊಟಮಾಡಿ ಪನ್ನಿಪ್ಪಾರದ ವಾಸಸ್ಥಳದಲ್ಲಿ ನಿದ್ರಿಸಿದ್ದ ರಾಜು ಇಂದು ಬೆಳಿಗ್ಗೆ ವೇಳೆ ಕಟ್ಟಡದಿಂದ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಮೃತದೇಹ ಜನರಲ್ ಆಸ್ಪತ್ರೆಗೆ ತಲುಪಿಸಿದ್ದು ಊರಿಗೆ ಕೊಂಡೊ ಯ್ಯಲು ಸಿದ್ಧತೆ ನಡೆಯುತ್ತಿದೆ.

NO COMMENTS

LEAVE A REPLY