ಸರ್ವೀಸ್ ಸ್ಟೇಶನ್ನಲ್ಲಿ ಯುವಕನಿಗೆ ದಿಗ್ಬಂಧನ ಫೇಸ್ ಬುಕ್ ಸ್ನೇಹಿತರ ಸಹಾಯದಿಂದ ಬಿಡುಗಡೆ

0
41

ಮಂಜೇಶ್ವರ: ಸರ್ವೀಸ್‌ಗೆಂದು ನೀಡಿದ ಬುಲ್ಲೆಟ್ ಬೈಕ್‌ನ್ನು ಪಡೆಯಲು ಹೋದ ಯುವಕನನ್ನು ಸರ್ವೀಸ್ ಸ್ಟೇಶನ್‌ನವರು ಕೊಠಡಿಯೊಳಗೆ ಹಾಕಿ ಬೀಗಜಡಿದ ಬಗ್ಗೆ ದೂರುಂಟಾಗಿದೆ.

ಉಪ್ಪಳ ಮಣ್ಣಂಗುಳಿ ನಿವಾಸಿ ಹಾಗೂ ಟ್ರಾವೆಲ್ಸ್ ಮಾಲಕ ಅಬೂಬಕರ್ ಸಿದ್ದಿಕ್ (೩೮) ಎಂಬವರಿಗೆ ಈ ಅನುಭವವುಂಟಾಗಿದೆ.

ಸಿದ್ದಿಕ್ ಹೊಸ ಎನ್‌ಫೀಲ್ಡ್ ಬುಲ್ಲೆಟ್  ಬೈಕ್ ಖರೀದಿಸಿದ್ದರು. ಅದರಲ್ಲಿ ತಾಂತ್ರಿಕ ದೋಷಕಂಡುಬಂದುದರಿಂದ   ಬೈಕ್‌ನ್ನು ಮಂಗಳೂರು ನಗರದ ಸರ್ವೀಸ್ ಸ್ಟೇಶನ್‌ಗೆ ಕೊಂಡೊಯ್ದಿದ್ದರು. ಮೂರು ದಿನಗಳು ಕಳೆದರೂ ಸರ್ವೀಸ್ ಸ್ಟೇಶನ್ ಮಾಲಕ ಬೈಕ್  ದುರಸ್ತಿಗೊಳಿಸಿರಲಿಲ್ಲ. ಅದರಿಂದ ಸಿದ್ದಿಕ್ ಶುಕ್ರವಾರ  ಸರ್ವೀಸ್ ಸ್ಟೇಶನ್‌ಗೆ ಹೋದಾಗ ಸಂಜೆ ೫ ಗಂಟೆಯೊಳಗೆ ಸರಿಪಡಿಸಿ ನೀಡುವುದಾಗಿ ಭರವಸೆ ನೀಡಿದ್ದರೆನ್ನಲಾಗಿದೆ. ಆದರೆ ರಾತ್ರಿ ೭ ಗಂಟೆಯಾದರೂ ಸರಿಪಡಿಸ ದಾಗ ಕಾರಣ ಕೇಳಿದಾಗ ಮೆಕ್ಯಾನಿಕ್ ಎರಡು ದಿನ ರಜೆಯೆಂದು ತಿಳಿಸಿ ನಾಳೆ ಸರಿಪಡಿಸಿಕೊಡುವುದಾಗಿ ಮಾಲಕ ತಿಳಿಸಿದ್ದರೆನ್ನಲಾಗಿದೆ. ಅದನ್ನು ಪ್ರಶ್ನಿ ಸಿದ್ದಕ್ಕೆ  ಆ ಸಂಸ್ಥೆಯವರು ಸಿದ್ದಿಕ್‌ರ ಮೇಲೆ ಕೈಮಾಡಲೆತ್ನಿಸಿ, ಅವರನ್ನು ಸರ್ವೀಸ್ ಸ್ಟೇಶನ್‌ನೊಳಗೆ ಕೂಡಿ ಹಾಕಿ ಶೆಟರ್ ಬೀಗ ಜಡಿದರೆಂದು ದೂರಲಾಗಿದೆ. ಹೊರಗೆ ಬರಲು ಸಾಧ್ಯವಾಗದೆ ಸಿದ್ದಿಕ್ ತನ್ನ ಫೇಸ್ ಬುಕ್  ಮೂಲಕ ವಿಷಯವನ್ನು ಮಂಗಳೂರು ಮತ್ತು ತನ್ನ ಊರಿನಲ್ಲಿರುವ ಸ್ನೇಹಿತರಿಗೆ ಸಂದೇಶ ರವಾನಿಸಿದರು. ಸಂದೇಶ ಲಭಿಸಿದ ಸ್ನೇಹಿತರು ತಕ್ಷಣ ಸರ್ವೀಸ್ ಸ್ಟೇಶನ್ ಮಾಲಕನನ್ನು ಫೋನ್ ಮೂಲಕ ಸಂಪರ್ಕಿಸಿ, ಸಿದ್ದಿಕ್‌ನನ್ನು ತಕ್ಷಣ ಬಿಡುಗಡೆಗೊಳಿಸುವಂತೆಯೂ, ಇಲ್ಲವಾದಲ್ಲಿ ಪೊಲೀಸರಿಗೆ ದೂರು ನೀಡುವುದಾಗಿ ಮುನ್ನೆಚ್ಚರಿಕೆ ನೀಡಿದರು. ಅದರಿಂದ   ಮಾಲಕ   ಬಿಡುಗಡೆಗೊಳಿಸಿದರೆಂದು ದೂರಲಾಗಿದೆ.

NO COMMENTS

LEAVE A REPLY