ನಗರಸಭಾ ಜನಸೇವಾ ಕೇಂದ್ರದ ಯುಪಿಎಸ್ ಬ್ಯಾಟರಿ ನಾಪತ್ತೆ

0
62

ಕಾಸರಗೋಡು: ವಿದ್ಯುತ್ ಪ್ರಸಾರ ಮೊಟಕುಗೊಂಡಾಗ ಕಂಪ್ಯೂಟರ್ ಚಟುವಟಿಕೆ ವಿಘ್ನವಾಗದೆ ನೋಡಿಕೊಳ್ಳುವುದಕ್ಕಾಗಿ ನಗರಸಭೆ ಜನಸೇವಾ ಕೇಂದ್ರಕ್ಕಾಗಿ ಖರೀದಿಸಿ ಒಂದು ಹೈಕೋನ್ ಟ್ಯೂಬ್ಲರ್ ಬ್ಯಾಟರಿ ನಗರಸಭಾ ಕಚೇರಿಯಿಂದ ನಾಪತ್ತೆಯಾದ ಘಟನೆ ನಡೆದಿದೆ.

ನಗರಸಭಾ ಅಧಿಕಾರಿಗಳು, ನೌಕರರಿಗೆ ತಿಳಿಯದಂತೆ ಬ್ಯಾಟರಿ ಅಲ್ಲಿಂದ ಕಳವುಗೀಡಾಗಿರಲಿಕ್ಕಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಾರೆ. ಆದರೆ ಅಧಿಕಾರಿಗಳು  ಕೂಡಾ ಈ ವಿಷಯವನ್ನು ಬಹಿರಂಗಪಡಿಸಿಲ್ಲ.  ನೌಕರರು ಕೂಡಾ ಬ್ಯಾಟರಿ ನಾಪತ್ತೆಯಾದ ಹೊಣೆಯನ್ನು ವಹಿಸಿಕೊಂಡಿಲ್ಲ.

ಈಮಧ್ಯೆ ಆಡಿಟಿಂಗ್ ವಿಭಾಗ ನಡೆಸಿದ ಪರಿಶೀಲನೆಯಲ್ಲಿ ಬ್ಯಾಟರಿ ನಾಪತ್ತೆಯಾದುದನ್ನು ಕಂಡುಹಿಡಿಯಲಾಗಿದೆ. ೧೦ ಕೆ.ವಿ.ಎ. ಆನ್‌ಲೈನ್ ಯುಪಿಎಸ್ ಕಂಪ್ಯೂಟರಿಗಾಗಿ ೧೬ ಬ್ಯಾಟರಿಗಳನ್ನು ಯೋಜನೆಯಲ್ಲಿ ಖರೀದಿಸಲಾಗಿದೆ ಯೆಂದು ಪುಸ್ತಕದಲ್ಲಿ ದಾಖಲಿಸಿಡಲಾ ಗಿದೆ. ಆದರೆ ಅದೆಲ್ಲ ಎಲ್ಲಿದೆಯೆಂದು ಆಡಿಟರ್ ನಗರಸಭಾಧಿಕಾರಿಗಳಲ್ಲಿ ಪ್ರಶ್ನಿಸಿದ್ದಾರೆ. ನಗರಸಭೆಗೆ ಈ ಬಾಬ್ತು ೧೦,೨೪೧ ರೂ. ನಷ್ಟವುಂಟಾಗಿದೆ.

ಆದರೆ ಆಡಿಟಿಂಗ್ ವಿಭಾಗ ಮತ್ತೆ ಪ್ರಶ್ನಿಸಿದಾಗ ನಗರಸಭೆ ಅಧಿಕಾರಿಗಳು ಬ್ಯಾಟರಿ ನಾಪತ್ತೆ ಬಗ್ಗೆ ಗಮನಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಬ್ಯಾಟರಿ ನಾಪತ್ತೆಯಾದ ಹಿನ್ನೆಲೆಯಲ್ಲಿ ನಗರಸಭೆಯ ಇಲೆಕ್ಟ್ರಾನಿಕ್ ವಿಭಾಗದ ಸಂರಕ್ಷಣೆ ಹೊಣೆ ಇರುವ ನೌಕರರಿಂದ ಬ್ಯಾಟರಿಯ ಬೆಲೆ ವಸೂಲು ಮಾಡಲಾ ಗುವುದೆಂದು ಇವರು ಸೂಚಿಸಿದರು. ನಗರಸಭೆಯ ಈ ತೀರ್ಮಾನ ಉಚಿತವೆಂದು ಕೆಲವರು ಭಾವಿಸಬಹುದು. ಆದರೆ ನಗರಸಭೆಯ ಇಲೆಕ್ಟ್ರಾನಿಕ್ಸ್ ವಿಭಾಗದ ಸಂರಕ್ಷಣೆಯ ಹೊಣೆ ಯಾವುದೇ ನೌಕರನಿಗೆ ನೀಡಲಾಗಿಲ್ಲವೆಂದು ಆಡಿಟ್ ವಿಭಾಗದ ತನಿಖೆಯಿಂದ ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಯಾರಿಗೆ ಹೊಣೆ ನೀಡಲಾಗಿದೆಯೆಂದು ಮತ್ತೆ ಆಡಿಟ್ ವಿಭಾಗ ಪ್ರಶ್ನಿಸಿದಾಗ ಈಬಗ್ಗೆ ಯಾವುದೇ ದಾಖಲೆ ಹಾಜರುಪಡಿ ಸಲು ನಗರಸಭೆಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಯುಪಿಎಸ್ ವ್ಯವಸ್ಥೆ ಸಿದ್ಧಪಡಿಸಲು ಮೊತ್ತ ನೀಡಿದ ನೌಕರರಿಂದ ಬ್ಯಾಟರಿಯ ಬೆಲೆ ವಸೂಲು ಮಾಡಲು ಆಡಿಟ್ ವಿಭಾಗ ನಗರಸಭಾಧಿಕಾರಿಗಳಿಗೆ ನಿರ್ದೇಶಿಸಿದೆ ಯೆಂದು ತಿಳಿದುಬಂದಿದೆ.

NO COMMENTS

LEAVE A REPLY