ಅಫಘಾನಿಸ್ತಾನದಲ್ಲಿ ಸಾವನ್ನಪ್ಪಿದ ಪಡನ್ನ ನಿವಾಸಿಯ ದೃಶ್ಯ ಪತ್ತೆ

0
76
LiquidLibrary

ಕಾಸರಗೋಡು: ಜಿಲ್ಲೆಯ ತೃಕರಿಪುರ ಮತ್ತು ಪಡನ್ನದಿಂದ ಕಳೆದ ಮೇ ತಿಂಗಳಿನಿಂದ ನಾಪತ್ತೆಯಾದ ೧೭ ಮಂದಿಯ ಪೈಕಿ ಪಡನ್ನ ಕಾವುಂತಲ ನಿವಾಸಿ ಹಫಿಸುದ್ದೀನ್(೨೩) ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಶಕ್ತಿ ಕೇಂದ್ರದಲ್ಲಿ ಬಾಂಬು ಆಕ್ರಮಣದಲ್ಲಿ ಸಾವನ್ನಪ್ಪಿರುವುದನ್ನು ಖಚಿತಪಡಿಸುವ ದೃಶ್ಯ ಊರಲ್ಲಿರುವ ಅವರ ಮನೆಯವರಿಗೆ ಲಭಿಸಿದೆ.

ಅಫ್ಘಾನಿಸ್ತಾನದ ತೋರಾಬಾರದ ಮಲೆ ಪ್ರದೇಶದಲ್ಲಿ ಹಫಿಸುದ್ದೀನ್ ಹತ್ಯೆಗೀಡಾಗಿದ್ದನು. ತೋರಾಬಾರ ಮಲೆಪ್ರದೇಶ ಜಾಗತಿಕ ಉಗ್ರಗಾಮಿ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ನ ಶಕ್ತಿ ಕೇಂದ್ರವಾಗಿದ್ದು  ಅಲ್ಲಿ ಕಳೆದ ಫೆಬ್ರವರಿ ೨೪ರಂದು ಅಫ್ಘಾನಿಸ್ತಾನ ಸೇನೆ ನಡೆಸಿದ ಡ್ರಾನ್ ವ್ಯೋಮ ಆಕ್ರಮಣದಲ್ಲಿ ಹಲವರು ಐ.ಎಸ್ ಉಗ್ರರು ಸಾವನ್ನಪ್ಪಿದ್ದರು. ಅದರಲ್ಲಿ ಹಫಿಸುದ್ದೀನ್ ಕೂಡಾ ಸಾವನ್ನಪ್ಪಿ ರುವುದಾಗಿ ಊರಲ್ಲಿರುವ ಆತನ ಸಂಬಂಧಿಕರಿಗೆ ಮೊಬೈಲ್ ಫೋನ್‌ನಲ್ಲಿ ಟೆಲಿಗ್ರಾಂ ಸಂದೇಶ ಲಭಿಸಿತ್ತು. ಆದರೆ ಹಫಿಸುದ್ದೀನ್‌ನ ಸಾವನ್ನು ಆ ಬಗ್ಗೆ ತನಿಖೆ ನಡೆಸುತ್ತಿರುವ ಎನ್.ಐ.ಎ ಮೊದಲು ಖಚಿತಪಡಿಸಿರಲಿಲ್ಲ. ಈಗ ಹಫಿಸುದ್ದೀನ್ ಹತ್ಯೆಗೊಳಗಾದ ಚಿತ್ರಗಳು ಎನ್.ಐ.ಎಗೂ ಲಭಿಸಿದೆ. ಮಾತ್ರವಲ್ಲದೆ ಆ ಚಿತ್ರ ಹಫಿಸುದ್ದೀನ್‌ನ ಮನೆಯವರಿಗೂ ಕಳುಹಿಸಿಕೊಡಲಾಗಿದೆ. ಹತ್ಯೆಗೊಳಗಾದ ಹಫಿಸುದ್ದೀನ್ ಮೂರು ತಿಂಗಳ ಹಿಂದೆ ಅಫ್ಘಾನಿಸ್ತಾನ ದಲ್ಲಿ ಓರ್ವೆ ಯುವತಿಯನ್ನು ಮದುವೆಯಾಗಿದ್ದಾನೆಂಬ ಮಾಹಿತಿಯೂ ಎನ್.ಐ.ಎಗೆ ಲಭಿಸಿದೆ. ಕಳೆದ ಮೇ ೨೫ರಿಂದ ಜೂನ್ ೨೦ರೊಳಗಾಗಿ ಹಫಿಸುದ್ದೀನ್ ಮತ್ತು ಇತರ ೧೭ ಮಂದಿ ಶ್ರೀಲಂಕಾಕ್ಕೆ ಹೋಗುವುದಾಗಿ ಮನೆಯವರಲ್ಲಿ ತಿಳಿಸಿ ಬಳಿಕ ಅಫ್ಘಾನಿಸ್ತಾನಕ್ಕೆ ತೆರಳಿ ಐಎಸ್ ಶಿಬಿರಕ್ಕೆ ಸೇರಿದ್ದರೆಂಬ ಮಾಹಿತಿ ಎನ್‌ಐಗೆ ಲಭಿಸಿತ್ತು. ಬಳಿಕ ಅಫ್ಘಾನಿಸ್ತಾನದ ಗುಪ್ತಚರ ವಿಭಾಗದ ಸಹಾಯದೊಂದಿಗೆ ಮುಂದುವರಿಸಿ ನಡೆಸಿದ ತನಖೆಯಲ್ಲಿ ನಾಪತ್ತೆಯಾದವರು ಅಫ್ಘಾನಿಸ್ತಾನದ ತೋರಾಬಾರ ಮಲೆ ಪ್ರದೇಶದ ಐಎಸ್ ಶಿಬಿರದಲ್ಲಿರುವ ಬಗ್ಗೆ ಎನ್.ಐ.ಎಗೆ ಖಚಿತ ಮಾಹಿತಿ ಲಭಿಸಿತ್ತು.

 

NO COMMENTS

LEAVE A REPLY