ಚೆರ್ಕಳ ಪೇಟೆಯಲ್ಲಿ ಕಾಡುಕೋಣ ಪ್ರತ್ಯಕ್ಷ

0
106

ಕಾಸರಗೋಡು: ಚೆರ್ಕಳ ಪೇಟೆಯಲ್ಲಿ ಇಂದು ಮುಂಜಾನೆ ಎರಡು ಕಾಡುಕೋಣಗಳು ಪ್ರತ್ಯಕ್ಷಗೊಂಡು ಜನರಲ್ಲಿ ಭೀತಿಮೂಡಿಸಿದೆ.

ಚೆರ್ಕಳ ಪೇಟೆಯ ಸರ್ಕಲ್‌ನಲ್ಲಿ ಇಂದು ಮುಂಜಾನೆ ಸುಮಾರು ೨.೩೦ರ ವೇಳೆಗೆ ಈ ಎರಡು ಕಾಡುಕೋಣಗಳು ಪ್ರತ್ಯಕ್ಷಗೊಂಡಿವೆ. ಅದನ್ನು ಕಂಡ ಜನರು ಬೆಚ್ಚಿಬಿದ್ದಿದ್ದಾರೆ. ಕಾಡುಕೋಣಗಳು ಆ ದಾರಿಯಾಗಿ ಸಾಗುವ ವಾಹನ ಸಂಚಾರಕ್ಕೂ ಅಡಚಣೆ ಸೃಷ್ಟಿಸಿದೆ. ಊರವರು ಆ ಕೂಡಲೇ ವಿದ್ಯಾನಗರ ಪೊಲೀಸರು ಮತ್ತು ಅರಣ್ಯ ಪಾಲಕರಿಗೂ ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ಮತ್ತು ಅರಣ್ಯ ಪಾಲಕರು ಅಲ್ಲಿಗೆ ಆಗಮಿಸಿದಾಗ ಕಾಡುಕೋಣಗಳು  ಅಲ್ಲಿಂದ ಅಪ್ರತ್ಯಕ್ಷಗೊಂಡವು. ಇದರಿಂದಾಗಿ ಕಾಡುಕೋಣಗಳು ಚೆರ್ಕಳ ಪರಿಸರದಲ್ಲಿ ಅಥವಾ ಸಮೀಪದ ಮುಳಿಯಾರು ಪಂಚಾಯತ್‌ನ ಕಾಡು ಸೇರಿರಬಹುದೆಂದು ಶಂಕಿಸಲಾಗುತ್ತಿದೆ. ಬೇಸಿಗೆ ಕಾಲ ತಾರಕಕ್ಕೇರುವಂತೆಯೇ ಕಾಡುಗಳಲ್ಲಿ ತಿನ್ನಲು ಆಹಾರ  ಮತ್ತು ಕುಡಿಯಲು ನೀರೂ ಲಭಿಸದೇ ಇರುವ ಹಿನ್ನೆಲೆಯಲ್ಲಿ ಕಾಡುಕೋಣಗ ಳು ಜನವಾಸ ಕೇಂದ್ರಗಳಿಗೆ ಬಂದಿರಬಹುದೆಂದು ಪೊಲೀಸರು ಹೇಳುತ್ತಿದ್ದಾರೆ.

NO COMMENTS

LEAVE A REPLY