ಕನ್ನಡ ಪಿ.ಎಸ್.ಸಿ ಪರೀಕ್ಷೆಯಲ್ಲಿ ಮಲಯಾಳ ಶಬ್ದಗಳು : ಪರೀಕ್ಷೆ ಇನ್ನೊಮ್ಮೆ ನಡೆಸಲು ಅಧಿಕಾರಿಗಳಿಗೆ ಮನವಿ ನಿರ್ಧಾರ

ಕಾಸರಗೋಡು: ಹಿರಿಯ ಪ್ರಾಥಮಿಕ ವಿಭಾಗದ ಕನ್ನಡ ಅಧ್ಯಾಪಕರ ಹುದ್ದೆಗಾಗಿ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಮಲಯಾಳ ಶಬ್ದಗಳನ್ನು ಕನ್ನಡ ಅಕ್ಷರಗಳಲ್ಲಿ ನೀಡಿ ಪರೀಕ್ಷಾರ್ಥಿಗಳ ನ್ನು ಸತಾಯಿಸಿದ ಕ್ರಮದ ವಿರುದ್ಧ ಕೆಪಿಎಸ್‌ಸಿ ಚಯರ್‌ಮ್ಯಾನ್‌ರಿಗೆ ಮನವಿ ನೀಡಲು ಉದ್ಯೋಗಾರ್ಥಿ ಗಳು ಸಿದ್ಧರಾಗಿದ್ದಾರೆ. ಯುಪಿಎಸ್‌ಟಿ ಕನ್ನಡ ವಿಭಾಗದಲ್ಲಿ ತೆರವಾಗಿರುವ ಹುದ್ದೆಗಳ ಭರ್ತಿಗೆ ಕಳೆದ ಶನಿವಾರಪರೀಕ್ಷೆ ನಡೆಸಲಾಗಿತ್ತು.

ಆದರೆ ಕನ್ನಡದಲ್ಲಿ ಕಲಿತ ಉದ್ಯೋಗಾರ್ಥಿಗಳು ಪರೀಕ್ಷೆ ಬರೆಯಲೆಂದು ಕುಳಿತಾಗ  ಪ್ರಶ್ನೆಪತ್ರಿಕೆ ಅರ್ಥವಾಗದ ರೀತಿಯಲ್ಲಿ ಮಲಯಾಳ ಶಬ್ದಗಳೇ ತುಂಬಿ ಪರೀಕ್ಷೆ ಬರೆಯುವವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಈ ಬಗ್ಗೆ ಉದ್ಯೋ ಗಾರ್ಥಿಗಳು ರೋಷಗೊಂಡಿದ್ದರು. ಕನ್ನಡದಲ್ಲಿ ಕಲಿತವರೆಂಬುದರಿಂದಾಗಿ ತಮಗೆ ಅಧಿಕಾರಿವರ್ಗ ಈ ಶಿಕ್ಷೆ ನೀಡುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಈ ಪರೀಕ್ಷೆಯನ್ನು ರದ್ದುಪಡಿಸಿ ಸರಿಯಾದ ಪ್ರಶ್ನೆ  ಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ಇನ್ನೊಮ್ಮೆ ನಡೆಸಬೇಕೆಂದು ಉದ್ಯೋಗಾರ್ಥಿಗಳು ಆಗ್ರಹಿಸಿದ್ದಾರೆ. ಈ ಬಗ್ಗೆ ಅಧಿಕಾರಿ ಗಳಿಗೆ ಮನವಿ ನೀಡುವುದಾಗಿಯೂ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page