ಜಿಲ್ಲಾ ಬ್ಯಾಂಕ್ ಆಡಳಿತ ಸಮಿತಿ ಬರ್ಖಾಸ್ತು ಕ್ರಮ ಹೈಕೋರ್ಟ್ ಅಂಗಣಕ್ಕೆ

0
34

ಕಾಸರಗೋಡು: ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕ್‌ನ ಆಡಳಿತ ಸಮಿತಿಯನ್ನು ಬರ್ಖಾಸ್ತುಗೊಳಿಸಿ ಅಡ್ಮಿನಿಸ್ಟ್ರೇಟಿವ್ ಆಡಳಿತೆ ಜ್ಯಾರಿಗೊಳಿಸಿದ ರಾಜ್ಯ ಸಹಕಾರಿ ಸಂಘ ರಿಜಿಸ್ಟ್ರಾರ್‌ರ ಕ್ರಮ ಈಗ ಹೈಕೋರ್ಟ್‌ನ ಅಂಗಣ ಪ್ರವೇಶಿಸಿದೆ.

ಜಿಲ್ಲಾ ಸಹಕಾರಿ ಬ್ಯಾಂಕ್‌ನ ಆಡಳಿತ ಸಮಿತಿಯ ಸದಸ್ಯರಾಗಿ ಬಳಿಕ ಅನರ್ಹರೆಂದು ಘೋಷಿಸಲ್ಪಟ್ಟ ಮಲಬಾರ್ ಟೂರಿಸಂ ಸಹಕಾರಿ ಸಂಘದ ಗೌರವ ಕಾರ್ಯದರ್ಶಿ ಹಾಗೂ ಜಿಲ್ಲಾ ಬ್ಯಾಂಕ್‌ನ ನಿವೃತ್ತ ಸೀನಿಯರ್ ಮೆನೇಜರ್ ಕೂಡಾ ಆಗಿರುವ ಮಾಧವನ್ ನಾಯರ್ ಜಿಲ್ಲಾ ಸಹಕಾರಿ ಬ್ಯಾಂಕ್‌ನ ಆಡಳಿತ ಸಮಿತಿಯನ್ನು ಬರ್ಖಾಸ್ತುಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಬರ್ಖಾಸ್ತುಗೊಳಿಸಲ್ಪಟ್ಟ ಬ್ಯಾಂಕ್ ನ ಆಡಳಿತ  ಸಮಿತಿಯನ್ನು ಪುನಃಸ್ಥಾಪಿಸಬೇಕೆಂದು ಅರ್ಜಿಯಲ್ಲಿ ಆಗ್ರಹಪಡಲಾಗಿದೆ.  ಜಿಲ್ಲಾ ಬ್ಯಾಂಕ್‌ನ ಆಡಳಿತ ಸಮಿತಿ ಬರ್ಖಾಸ್ತುಗೊಳಿಸುವ ಮೊದಲು ಆ ಬಗ್ಗೆ ತನಗೆ ನೋಟೀಸ್ ನೀಡಿಲ್ಲವೆಂದೂ ಅರ್ಜಿಯಲ್ಲಿ ತಿಳಿಸಲಾಗಿದೆ. ಮಾಧವನ್ ನಾಯರ್ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್  ಅಂಗೀಕರಿಸಿದಲ್ಲಿ ಜಿಲ್ಲಾ ಬ್ಯಾಂಕ್ ಈಗ ಕೈಗೊಂಡಿರುವ ಕ್ರಮಗಳಲ್ಲಿ ಬದಲಾವಣೆ ತರಬೇಕಾಗಿದೆ.

NO COMMENTS

LEAVE A REPLY