ಶಾಲಾ ವಿದ್ಯಾರ್ಥಿನಿಯರಿಗೆ ಕಿರುಕುಳ ಅಧ್ಯಾಪಕನ ವಿರುದ್ಧ ಕೇಸು ದಾಖಲು

0
63

ಬದಿಯಡ್ಕ: ಶಾಲಾ ವಿದ್ಯಾರ್ಥಿನಿ ಯರಿಗೆ ಲೈಂಗಿಕ ಕಿರುಕಳ ನೀಡಿದ ಆರೋಪದಂತೆ ಅಧ್ಯಾಪಕನ  ಪೋಕ್ಸೋ ಕಾನೂನು ಪ್ರಕಾರ ಬದಿಯಡ್ಕ ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕಟ್ಟತ್ತಡ್ಕ ನಿವಾಸಿಯಾದ ಅಧ್ಯಾಪಕ ಅಬೂಬಕರ್ (೪೬) ವಿರುದ್ಧ ಕೇಸು ದಾಖಲಿಸಲಾಗಿದೆ.

ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ ಏಳನೇ ತರಗತಿಯ ಆರು ವಿದ್ಯಾರ್ಥಿನಿಯರಿಗೆ ಈ ಅಧ್ಯಾಪಕ ಲೈಂಗಿಕ ಕಿರುಕುಳ ನೀಡಿದ್ದಾನೆಂಬ ಆರೋಪವುಂಟಾಗಿದೆ. ಕಳೆದ ಹದಿನೈದು ದಿನಗಳಿಂದ ವಿದ್ಯಾರ್ಥಿನಿಯರಿಗೆ ಈತ ಕಿರುಕುಳ ನೀಡಿರುವುದಾಗಿ ಹೇಳಲಾಗುತ್ತಿದೆ. ತಮಗುಂಟಾದ ದೌರ್ಜನ್ಯದ ಬಗ್ಗೆ ಪತ್ರ ಬರೆದು ವಿದ್ಯಾರ್ಥಿನಿಯರು ಶಾಲೆಯ ದೂರು ಪೆಟ್ಟಿಗೆಯಲ್ಲಿ ಹಾಕಿದ್ದರು. ಆ ಪತ್ರ ಅಧ್ಯಾಪಕರಿಗೆ ಲಭಿಸಿದ್ದು, ಅದನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂ ತರಿಸಲಾಗಿತ್ತು. ಬಳಿಕ ಮುಖ್ಯೋ ಪಾಧ್ಯಾಯರು ಚೈಲ್ಡ್ ಲೈನ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಚೈಲ್ಡ್ ಲೈನ್ ಅಧಿಕಾರಿಗಳು ಬದಿಯಡ್ಕ ಪೊಲೀಸರನ್ನು ಸಂಪರ್ಕಿಸಿ ಆರೋಪದ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ವಿನಂತಿಸಿದ್ದರು. ಇದರಂತೆ ಅಧ್ಯಾಪಕನ ವಿರುದ್ಧ ಆರೋಪ ಹೊರಿಸಿದ ವಿದ್ಯಾರ್ಥಿನಿಯರಿಂದ ಪೊಲೀಸರು ನಿನ್ನೆ ಹೇಳಿಕೆ ದಾಖಲಿಸಿಕೊಂಡಿದ್ದು ಈವೇಳೆ ಅಧ್ಯಾಪಕನ  ವಿರುದ್ಧ ಹೇಳಿಕೆ ನೀಡಿದ್ದರೆನ್ನಲಾಗಿದೆ. ಇದರಂತೆ ಅಧ್ಯಾಪಕ ಅಬೂಬಕರ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY