ಉಪ್ಪಳ ಶ್ರೀ ಅಯ್ಯಪ್ಪ ಮಂದಿರ ಗುರುಸ್ವಾಮಿ ನಿಧನ

0
43

ಉಪ್ಪಳ ಇಲ್ಲಿನ ಶ್ರೀ ಅಯ್ಯಪ್ಪ ಮಂ ದಿರದಲ್ಲಿ ಕಳೆದ ೪೭ ವರ್ಷಗಳ ಕಾಲ ಗುರುಸ್ವಾಮಿಯಾಗಿ ಅಪಾರ ಶಿಷ್ಯವೃಂದ ವನ್ನು ಹೊಂದಿದ್ದ ಗುರುಸ್ವಾಮಿಯೆಂದೇ ಕರೆಸಿಕೊಂಡಿದ್ದ ಕುಟ್ಟಿಪುರಂ ಕಾಲಡಿ ನಿವಾಸಿ ಪಿ.ವಿ. ಅಚ್ಚು (೭೭) ಇಂದು ಮುಂಜಾನೆ ಸ್ವ-ಗೃಹದಲ್ಲಿ ನಿಧನಹೊಂದಿದರು. ರೈಲ್ವೇಯಲ್ಲಿ ಉದ್ಯೋಗಿಯಾಗಿ ಉಪ್ಪಳಕ್ಕೆ ಆಗಮಿಸಿದ ಇವರು ಜಿಲ್ಲೆಯ ವಿವಿಧ ರೈಲು ನಿಲ್ದಾಣಗಳಲ್ಲಿ ದುಡಿದಿದ್ದಾರೆ. ಅಯ್ಯಪ್ಪ ಮಂದಿರದ ಗುರುಸ್ವಾಮಿಯಾಗಿ ನೂರಾರು ಮಂದಿಯನ್ನು ಶಬರಿಮಲೆಗೆ ಮುದ್ರೆ ಧರಿಸಿ ಕರೆದುಕೊಂಡು ಹೋಗಿದ್ದರು. ೨೦೦೦ ಇಸವಿಯಲ್ಲಿ ಉದ್ಯೋಗದಿಂದ ನಿವೃತ್ತ ರಾದ ಬಳಿಕ ಪೂರ್ಣ ಪ್ರಮಾಣದಲ್ಲಿ ಮಂದಿರದ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ೨೦೧೫ರಲ್ಲಿ ಇವರು ಊರಿಗೆ ತೆರಳಿದ್ದರು. ಮಂದಿರದ ಅಯ್ಯಪ್ಪ ದೀಪೋತ್ಸವದ ವೇಳೆ ಇವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಗಿತ್ತು.

ಮೃತರು ಪತ್ನಿ ಮಾಧವಿ, ಮಕ್ಕಳಾದ ಸೌಧಾಮಿನಿ, ಮೀನ ಹಾಗೂ ಅಪಾರ ಬಂಧು-ಮಿತ್ರ, ಶಿಷ್ಯವರ್ಗವನ್ನು ಅಗಲಿದ್ದಾರೆ.

NO COMMENTS

LEAVE A REPLY