ಮಧ್ಯವಯಸ್ಕನ ಕುತ್ತಿಗೆ ಬಿಗಿದು ಕೊಲೆಗೆ ಕಾರಣ ಹಣ ವ್ಯವಹಾರ ಸ್ನೇಹಿತ

0
47

ಹೊಸದುರ್ಗ: ಕಾಞಂಗಾಡ್ ಬಳಿಯ ರಾವಣೇಶ್ವರದಲ್ಲಿ ಮಧ್ಯವಯಸ್ಕ ನನ್ನು ಕುತ್ತಿಗೆ ಬಿಗಿದು ಕೊಲೆಗೈದ ಪ್ರಕರಣದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ರಾವಣೇಶ್ವರ ನಿವಾಸಿ ಗೋಪಿ (೫೦) ಎಂಬಾತ ಸೆರೆಗೀಡಾದ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಕೊಟ್ಯಂಗಾಡ್ ನಿವಾಸಿ ರಘುನಾಥನ್ (೫೦)ರ ಕೊಲೆ ಸಂಬಂಧ ಗೋಪಿಯನ್ನು ಬಂಧಿಸಲಾಗಿದೆ. ರಾವಣೇಶ್ವರ ಕಾಲನಿಯ ಕಟ್ಟಡದ ವರಾಂಡದಲ್ಲಿ ಮೊನ್ನೆ ಸಂಜೆ ರಘುನಾಥನ್‌ರ ಮೃತದೇಹ  ಪತ್ತೆಯಾಗಿತ್ತು. ರಘುನಾಥನ್‌ರನ್ನು ಕುತ್ತಿಗೆ ಬಿಗಿದು ಕೊಲೆಗೈಯ್ಯಲಾಗಿದೆಯೆಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿತ್ತು. ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಲೆಗೆ ಹಾಕಿಕೊಂಡಿದ್ದರು. ಬಳಿಕ ಆತನನ್ನು ತನಿಖೆಗೊಳಪಡಿಸಿದಾಗ ಕೊಲೆಗೈದುದಾಗಿ ಆರೋಪಿ ತಪ್ಪೊಪ್ಪಿ ಕೊಂಡಿದ್ದಾನೆಂದು ಪೊಲೀಸರು ತಿಳಿಸಿ ದ್ದಾರೆ. ಕೊಲೆಗೀಡಾದ ರಘುನಾಥನ್ ಹಾಗೂ ಆರೋಪಿ ಗೋಪಿ ಕಲ್ಲುಕಡಿಯುವ ಕಾರ್ಮಿಕರಾಗಿದ್ದು ಒಟ್ಟಿಗೆ ಕೆಲಸಕ್ಕೆ ತೆರಳುತ್ತಿದ್ದರು.  ರಘುನಾಥನ್‌ರಲ್ಲಿ  ಮೊನ್ನೆ ಆರೋಪಿ ಗೋಪಿ ೫೦೦ ರೂ. ಕೇಳಿದ್ದನು. ಆದರೆ ನೀಡಲು ಮುಂದಾಗಿಲ್ಲವೆನ್ನಲಾಗಿದೆ. ಈ ದ್ವೇಷದಿಂದ ರಘುನಾಥನ್‌ರನ್ನು ದೂಡಿಹಾಕಿದ ಆರೋಪಿ ಗೋಪಿ ಬಳಿಕ ಬಟ್ಟೆಯಿಂದ ಕುತ್ತಿಗೆ ಬಿಗಿದು ಕೊಲೆಗೈದಿದ್ದಾನೆಂದು ತನಿಖೆ ವೇಳೆ ತಿಳಿದುಬಂದಿದೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY