ಸೂರ್ಯತಾಪ: ಗಾಯಗೊಂಡ ಕಾರ್ಮಿಕ ಆಸ್ಪತ್ರೆಗೆ

0
51

ಮೊಗ್ರಾಲ್: ಮನೆಯ ಛಾವಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸೂರ್ಯತಾಪದಿಂದ ಸುಟ್ಟು ಗಾಯಗೊಂಡ ಘಟನೆ ನಿನ್ನೆ ಮಧ್ಯಾಹ್ನ ಮೊಗ್ರಾಲ್‌ನಲ್ಲಿ ಸಂಭವಿಸಿದೆ. ಇಲ್ಲಿನ ಮೈಮೂನ ನಗರ ನಿವಾಸಿ ಅಶ್ರಫ್(೪೨) ಎಂಬವರು ಮನೆಯ ಹೆಂಚು ತೆಗೆದು ದುರಸ್ತಿ ಕೆಲಸ ನಡೆಸುತ್ತಿದ್ದಂತೆ ಸೂರ್ಯತಾಪದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಇವರನ್ನು ಕುಂಬಳೆ ಸಿ.ಎಚ್.ಸಿಗೆ ದಾಖಲಿಸಿದ್ದು ಸೂರ್ಯನ ತಾಪದಿಂದ ಗಾಯಗೊಂಡಿ ರುವುದಾಗಿ ಡಾಕ್ಟರ್ ದೃಢೀಕರಿಸಿದ್ದಾರೆ.

NO COMMENTS

LEAVE A REPLY