ಆಟವಾಡಲು ತೆರಳಿದ ಯುವಕ ಬಾವಿಗೆಬಿದ್ದು ಮೃತ್ಯು

0
48

ಮಂಜೇಶ್ವರ: ಆಟವಾಡಲು ತೆರಳಿದ ಯುವಕ ನಿರ್ಮಾಣ ಹಂತದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಅಂಬಿತ್ತಾಡಿ ಅಕ್ಕರೆ ನಿವಾಸಿ ಮೂಸಕುಂಞಿ ಎಂಬವರ ಪುತ್ರ ಶಾಹುಲ್ ಹಮೀದ್ ಯಾನೆ ಸಲೀಂ (೨೧) ಮೃತ ದುರ್ದೈವಿ. ಈತ ನಿನ್ನೆ ಸಂಜೆ ಮನೆಯಿಂದ ಅಲ್ಪ ದೂರದಲ್ಲಿರುವ ಖಾಸಗಿ ವ್ಯಕ್ತಿಯ ಹಿತ್ತಿಲಿನಲ್ಲಿರುವ ನಿರ್ಮಾಣ ಹಂತದ ಬಾವಿಗೆ ಬಿದ್ದಿದ್ದಾನೆ. ಬೆಂಗಳೂರಿನಲ್ಲಿ ಸಹೋದರನ ಜತೆ ಬೇಕರಿ ಕೆಲಸ ನಿರ್ವಹಿಸುತ್ತಿದ್ದ ಶಾಹುಲ್ ಹಮೀದ್ ೧೨ ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದನು. ಮನೆ ಸಮೀಪದ ಖಾಸಗಿ ವ್ಯಕ್ತಿಯ ಹಿತ್ತಿಲಿನಲ್ಲಿ ಪ್ರತಿದಿನ ಸಂಜೆ ಯುವಕರು ಕ್ರಿಕೆಟ್ ಆಡವಾಡುತ್ತಿದ್ದರು. ಇದರಂತೆ ನಿನ್ನೆ ಕೂಡಾ ಶಾಹುಲ್ ಹಮೀದ್  ಅಲ್ಲಿಗೆ ತೆರಳಿದ್ದನೆನ್ನಲಾಗಿದೆ. ಇದೇ ಪರಿಸರದಲ್ಲಿ ನಿರ್ಮಾಣ ಹಂತದಲ್ಲಿರುವ ಆವರಣರಹಿತ ಬಾವಿಗೆ ಶಾಹುಲ್ ಹಮೀದ್  ಆಯತಪ್ಪಿ ಬಿದ್ದಿದ್ದಾ ನೆನ್ನಲಾಗಿದೆ.  ವಿಷಯ ತಿಳಿದು ಪರಿಸರ ನಿವಾಸಿಗಳು ತಲುಪಿ ಮೇಲಕ್ಕೆತ್ತಿ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದ್ದು ಅಷ್ಟರಲ್ಲಿ ಆತ ಮೃತಪಟ್ಟಿದ್ದನು. ಮೃತದೇಹವನ್ನು ಬಳಿಕ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಮೃತನು ತಂದೆ, ತಾಯಿ ಕುಂಞಾಲಿಮ್ಮ, ಸಹೋದರ-ಸಹೋದರಿಯರಾದ ಶರೀಫ್, ರಜಾಕ್, ಶಾಫಿ, ಫಾತಿಮ ಮೊದಲಾದವರನ್ನು ಅಗಲಿದ್ದಾನೆ.

NO COMMENTS

LEAVE A REPLY