ಕಾಸರಗೋಡು: ರಾಷ್ಟ್ರೀಕೃತ ರೂಟ್ ಮತ್ತು ಸೂಪರ್ ಕ್ಲಾಸ್ ಪರ್ಮಿಟ್ಗಳನ್ನು ಸಂರಕ್ಷಿಸಬೇಕು, ಹೊಸ ಬಸ್ಗಳನ್ನು ಸೇವೆಗಿಳಿಸಬೇಕು, ಎಂ. ಪಾನೆಲ್ ಸಿಬ್ಬಂದಿಗಳಿಗೆ ದೈನಂದಿನ ವೇತನ ೫೦೦ ರೂ.ಗೇರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿಕೊಂಡು ಸಿ.ಐ.ಟಿ.ಯು ನೇತೃತ್ವದ ಕೆಎಸ್ಆರ್ಟಿಸಿ ಎಂಪ್ಲೋಯೀಸ್ ಅಸೋಸಿಯೇಷನ್ ನಿನ್ನೆ ರಾತ್ರಿ ೧೨ ಗಂಟೆಯಿಂದ ೨೪ ತಾಸುಗಳ ಬಸ್ ಮುಷ್ಕರ ನಡೆಸುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಹೆಚ್ಚಿನ ಎಲ್ಲಾ ಕೆಎಸ್ಆರ್ಟಿಸಿ ಬಸ್ ಸೇವೆಗಳು ಮೊಟಕುಗೊಂಡಿವೆ. ಕೆಲವೊಂದು ಬಸ್ಗಳು ಮಾತ್ರವೇ ಇಂದು ಸೇವೆ ನಡೆಸುತ್ತಿವೆ. ಇದರಂತೆ ಕಾಸರಗೋಡು- ಮಂಗಳೂರು, ಕಾಸರಗೋಡು- ಕಣ್ಣೂರು ಮತ್ತು ಇತರ ರೂಟ್ಗಳಲ್ಲಿ ಹೆಚ್ಚಿನ ಕೆಎಸ್ಆರ್ಟಿಸಿ ಬಸ್ಗಳ ಸೇವೆ ಮೊಟಕುಗೊಂಡಿದೆ. ಆದರೆ ಇದೇ ಸಂದರ್ಭದಲ್ಲಿ ಕರ್ನಾಟಕ ಕೆಎಸ್ಆರ್ಟಿಸಿ ಬಸ್ಗಳು ಅಬಾಧಿತವಾಗಿ ಎಂದಿನಂತೆ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು- ಮಂಗಳೂರು ರೂಟ್ನಲ್ಲಿ ಪ್ರಯಾಣಿಕರು ಹೆಚ್ಚು ಸಂಕಷ್ಟಪಡುವುದು ತಪ್ಪಿ ಹೋಗಿದೆ. ಕೆಎಸ್ಆರ್ಟಿಸಿ ಬಸ್ಗಳು ಮಾತ್ರವೇ ಸೇವೆ ನಡೆಸುತ್ತಿರುವ ಕಾಸರಗೋಡು ಚಂದ್ರಗಿರಿ ರೂಟ್ನಲ್ಲಿ ಬಸ್ಗಳ ಕಾರ್ಮಿಕರು ಮುಷ್ಕರದಲ್ಲಿ ನಿರತರಾಗಿರುವ ಕಾರಣದಿಂದಾಗಿ ಆ ಪ್ರದೇಶದ ಜನರು ಅತೀ ಹೆಚ್ಚು ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಸಿಐಟಿಯುಯೇತರ ಕಾರ್ಮಿಕರ ಸಂಘಟನೆಗಳಿಗೆ ಸೇರಿದ ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗಿಯಾಗದೇ ಇರುವ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಮುಷ್ಕರ ಆಂಶಿಕವಾಗಿ ಮುಂದುವರಿಯುತ್ತಿದೆ.