
ಉಪ್ಪಳ: ಸ್ಕೂಟರ್ನಲ್ಲಿ ಮನೆಯಿಂದ ಹೊರಗೆ ತೆರಳಿದ ಯುವಕ ಬಳಿಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಉಪ್ಪಳ ಮಣ್ಣಂಗುಳಿ ಕೋಡಿಬೈಲು ನಿವಾಸಿ ಮುಹಮ್ಮದ್ ಶಾಹಿಲ್ (28) ನಾಪತ್ತೆಯಾದ ಯುವಕ. ಈ ಬಗ್ಗೆ ಸಹೋದರ ಶೇಕ್ ಮೊಹಮ್ಮದ್ ಸುಹೈಲ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಂಗಳವಾರ ರಾತ್ರಿ 9.30ರ ವೇಳೆ ಮುಹಮ್ಮದ್ ಶಾಹಿಲ್ ಈಗ ಬರುತ್ತೇನೆಂದು ತಿಳಿಸಿ ಮನೆಯಿಂದ ಹೊರಗೆ ತೆರಳಿದ್ದರು. ಆದರೆ ಇದುವ ರೆಗೆ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.
ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಉಪ್ಪಳ ಪೇಟೆಯಲ್ಲಿ ನಿರ್ಮಾಣಗೊಂಡಿರವ ಫ್ಲೈ ಓವರ್ನ ಅಡಿಭಾಗದಲ್ಲಿ ತಡೆಗೋಡೆ ನಿರ್ಮಾಣವನ್ನು ಸ್ಥಳೀಯರು ವಿರೋಧಿಸಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸಲಾಗಿದೆ. ಫ್ಲೈ ಓವರ್ನ ಎರಡು ಭಾಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಉಳಿದ ಭಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು. ಮೊನ್ನೆ ಸಂಜೆ ನಾಗರಿಕರು ತಡೆದು ವಿರೋಧ ವ್ಯಕ್ತಪಡಿಸಿದ್ದರು. ಅದರಿಂದಾಗಿ ಅಂದು ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ನಿನ್ನೆ ಬೆಳಿಗ್ಗೆ ನಡೆದುಹೋಗಲು ದಾರಿಯನ್ನು ಇರಿಸಿ ಮತ್ತೆ ತಡೆಗೋಡೆ ನಿರ್ಮಾಣ ಕೆಲಸವನ್ನು ಆರಂಭಿಸಲಾಗಿತ್ತು. ಆದರೆ ನಾಗರಿಕರು …
Read more “ಉಪ್ಪಳ ಫ್ಲೈ ಓವರ್ ಅಡಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ನಾಗರಿಕರಿಂದ ವಿರೋಧ: ಕಾಮಗಾರಿ ಸ್ಥಗಿತ”
ಕಾಸರಗೋಡು: ಅಂಗಡಿಮೊಗರು ನಿವಾಸಿಯೋರ್ವರಿಗೆ ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ 42 ಲಕ್ಷ ರೂ. ಲಪಟಾಯಿಸಿದ ಪ್ರಕರಣದ ಆರೋಪಿಯನ್ನು ಆಂಧ್ರ ಪ್ರದೇಶದಿಂದ ಕಾಸರಗೋಡು ಸೈಬರ್ ಪೊಲೀಸರ ತಂಡ ಬಂಧಿಸಿದೆ. ಆಂಧ್ರಪ್ರದೇಶ ವಿಜಯವಾಡ ಕೃಷ್ಣಚಂದ್ರಪಾಡಲು ನಿವಾಸಿ ವಡಲಮುಡಿ ಫನಿ
ಕುಂಬಳೆ: ಇಚ್ಲಂಗೋಡು ಅಣೆಕಟ್ಟಿನ ಸಮೀಪ ಕಾಡಿನೊಳಗೆ ಕೋಳಿ ಅಂಕ ನಡೆಸುತ್ತಿದ್ದ ಏಳು ಮಂದಿಯನ್ನು ಬಂಧಿಸಲಾಗಿದೆ. ಸ್ಥಳದಿಂದ ೯ ಕೋಳಿಗಳು ಹಾಗೂ 2750 ರೂ.ಗಳನ್ನು ವಶಪಡಿಸಲಾಗಿದೆ. ಕಾಸರಗೋಡು ಕೂಡ್ಲುವಿನ ಸಂತೋಷ್ (32), ಬಾಯಾರು ಕನ್ಯಾನದ ದಿಲೀಪ್
ಬದಿಯಡ್ಕ: ಯುವಕನೋ ರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಚೇಡಿಕಾನ ನಿವಾಸಿ ದಿ| ಮುರಳಿ ಎಂಬವರ ಪುತ್ರ ಸುಮಂತ್ ಕುಮಾರ್ (25 ಸಾವಿಗೀಡಾದ ಯುವಕ. ಮನೆ ಸಮೀಪದ ಹಿತ್ತಿಲಲ್ಲಿ ನಿನ್ನೆ ಸಂಜೆ ವೇಳೆ
ಕಾಸರಗೋಡು: ಯುವಕ ನೋರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೀಯೂರು ಕಡಪ್ಪುರದ ದಿ| ರಾಜನ್ ಎಂಬವರ ಪುತ್ರ ರಾಹುಲ್ (21) ಮೃತಪಟ್ಟ ಯುವಕ. ನಿನ್ನೆ ಮಧ್ಯಾಹ್ನ ವೇಳೆ ರಾಹುಲ್ ಬೆಡ್‌ರೂಮ್‌ನಲ್ಲಿ ನೇಣು ಬಿಗಿದ
ಕಾಸರಗೋಡು: ಅಂಗಡಿಮೊಗರು ನಿವಾಸಿಯೋರ್ವರಿಗೆ ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ 42 ಲಕ್ಷ ರೂ. ಲಪಟಾಯಿಸಿದ ಪ್ರಕರಣದ ಆರೋಪಿಯನ್ನು ಆಂಧ್ರ ಪ್ರದೇಶದಿಂದ ಕಾಸರಗೋಡು ಸೈಬರ್ ಪೊಲೀಸರ ತಂಡ ಬಂಧಿಸಿದೆ. ಆಂಧ್ರಪ್ರದೇಶ ವಿಜಯವಾಡ ಕೃಷ್ಣಚಂದ್ರಪಾಡಲು ನಿವಾಸಿ ವಡಲಮುಡಿ ಫನಿ
ನವದೆಹಲಿ: ಪರಿಸರ ಸೂಕ್ಷ್ಮ ಪೆರಿಯಾರ್ ಹುಲಿ ಮೀಸಲು ಪ್ರದೇಶದಲ್ಲಿರುವ ಶಬರಿಮಲೆ ದೇವಾಲಯ ಬಳಿಯ ಪಂಪಾ ನದಿ ದಡದಲ್ಲಿ ಶನಿವಾರದಂದು ಜಾಗತಿಕ ಅಯ್ಯಪ್ಪ ಸಂಗಮ ನಡೆಸಲು ತಿರುವಿದಾಂಕೂರ್ ಮುಜುರಾಯಿ ಮಂಡಳಿಗೆ ಅನುಮತಿ ನೀಡಿದ ಕೇರಳ ಹೈಕೋರ್ಟ್‌ನ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು 75 ವಸಂತಕ್ಕೆ ಕಾಲಿರಿಸಿದ್ದು, ಇದರ ಅಂಗವಾಗಿ ಬಿಜೆಪಿಯು ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹುಟ್ಟುಹಬ್ಬದ ಸಲುವಾಗಿ ಕೇಂದ್ರ ಸರಕಾರವು ಇಂದಿನಿಂದ ಪೋಷಣ್ ಮಾಹ್ ಜೊತೆಗೆ ಸ್ವಸ್ಥನಾರಿ, ‘ಸಶಕ್ತ್
ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲಿ ಸುಂಕ ಸಮರದ ಹೆಸರಲ್ಲಿ ಉದ್ವಿಗ್ನತೆಯ ವಾತಾವರಣ ನೆಲೆಗೊಂಡಿರುವಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮತ್ತು ಪ್ರಧಾನಿ ಮೋದಿಯ ವರ ಬಗ್ಗೆ ತಳೆದಿದ್ದ ನಿಲುವಿನಿಂದ ಉಲ್ಟಾ
ನಾಳೆ ತಿರುವೋಣಂ. ಓಣಂ ಹಬ್ಬವನ್ನು ಸ್ವಾಗತಿಸಲು ಕೇರಳೀಯರು ಸಿದ್ಧತೆಯಲ್ಲಿದ್ದಾರೆ. ಮನೆಯಂಗಳದಲ್ಲಿ ಹೂರಂಗೋಲಿ ಸಿದ್ಧಪಡಿಸಲು ಹೂ, ಓಣಂ ಔತಣಕ್ಕಾಗಿ ಸಾಮಗ್ರಿಗಳು, ಹೊಸ ಬಟ್ಟೆಬರೆಗಳ ಖರೀದಿಗಾಗಿ ಜನರು ಈಗಾಗಲೇ ಆರಂಭಿಸಿದ್ದು, ಇಂದು ಅದು ಪಾರಮ್ಯಕ್ಕೇರಲಿದೆ. ಈಗಾಗಲೇ ಪೇಟೆಗಳಲ್ಲಿ
You cannot copy contents of this page