ಅಂಗಡಿಗೆಂದು ತೆರಳಿದ್ದ ಯುವತಿ ನಾಪತ್ತೆ
ಮಂಗಳೂರು: ತಾಯಿಯ ಮಾಲಕತ್ವದ ಜ್ಯೂಸ್‌ನಂಗಡಿಗೆ ತೆರಳಿದ್ದ 20ರ ಹರೆಯದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಉಡುಪಿ ಕಾಪು ತಾಲೂಕು ನಿವಾಸಿಯಾದ ಸಾನಿಯಾ ನಿಜ್ ನಾಪತ್ತೆಯಾದ ಯುವತಿ. ಘಟನೆಯಲ್ಲಿ ಕಾಪು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ತಿಂಗಳ 2ರಂದು ಯುವತಿ ನಾಪತ್ತೆಯಾಗಿದ್ದಳು. ರಾಷ್ಟ್ರೀಯ ಹೆದ್ದಾರಿ ಸಮೀಪ ಜ್ಯೂಸ್‌ನಂಗಡಿ ನಡೆಸುವ ತಾಯಿಗೆ ಸಹಾಯಕ್ಕೆಂದು ಸಾನಿಯಾ ಮನೆಯಿಂದ ಹೊರಟಿದ್ದಳು. ಆದರೆ ಆ ಬಳಿಕ ಹಿಂತಿರುಗಲಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಕನ್ನಡ, ಬ್ಯಾರಿ, ಹಿಂದಿ ಭಾಷೆಗಳನ್ನು ತಿಳಿದಿರುವ ಈಕೆಯ ಬಗ್ಗೆ ಮಾಹಿತಿ ಲಭಿಸಿದರೆ ಕಾಪು ಠಾಣೆಯ 0820-2551033 ಎಂಬ ನಂಬ್ರಕ್ಕೆ ಕರೆ ಮಾಡಬೇಕೆಂದು ಸರ್ಕಲ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.