ಅಂಗಡಿಗೆ ನುಗ್ಗಿದ ಕಳ್ಳರು: ವಿವಿಧ ಸಾಮಗ್ರಿಗಳೊಂದಿಗೆ ಪರಾರಿ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯ ಬಜಾರ್‌ನಲ್ಲಿರುವ ಜಿನಸು ಅಂಗಡಿಗೆ ಕಳ್ಳರು ನುಗ್ಗಿ ವಿವಿಧ ಸಾಮಗ್ರಿಗಳನ್ನು ದೋಚಿದ್ದಾರೆ. ಕೆ.ಎಂ. ಚಂದ್ರನ್ ಎಂಬವರ ಮಾಲಕತ್ವದಲ್ಲಿರುವ ಅಂಗಡಿಯ ಮುಂಭಾಗದ ಶಟರ್ ಮುರಿದು ಕಳ್ಳರು ನುಗ್ಗಿರುವುದಾಗಿ ತಿಳಿದುಬಂದಿದೆ.  2000 ರೂಪಾಯಿ ಮೌಲ್ಯದ ಸಿಗರೇಟು ಹಾಗೂ 2000 ರೂಪಾಯಿಗಳ ಬೇಕರಿ ಸಾಮಗ್ರಿಗಳನ್ನು ಕಳವುಗೈಯ್ಯಲಾಗಿದೆಯೆಂದು ವ್ಯಾಪಾರಿ ಚಂದ್ರನ್ ತಿಳಿಸಿದ್ದಾರೆ. ಇತರಸಾಮಗ್ರಿ ಗಳನ್ನು ಅಂಗಡಿಯೊಳಗೆ ಚಲ್ಲಾಪಿಲ್ಲಿಗೊ ಳಿಸಲಾಗಿದೆ. ಇಂದು ಬೆಳಿಗ್ಗೆ ಅಂಗಡಿ ತೆರೆಯಲು ತಲುಪಿದಾಗಲೇ ಕಳವು ನಡೆದ ಬಗ್ಗೆ ಅರಿವಿಗೆ ಬಂದಿದೆ. ಬೇಕಲ  ಪೊಲೀಸರು ತಲುಪಿ ಸಮೀಪದ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆದರೆ ಕಳ್ಳರ ಕುರಿತು ಯಾವುದೇ ಸೂಚನೆ ಲಭಿಸಿಲ್ಲ. ಕೇರಳ ಗ್ರಾಮೀಣ ಬ್ಯಾಂಕ್ ಪೆರಿಯ ಬಜಾರ್ ಶಾಖೆ ಕಾರ್ಯಾಚರಿಸುವ ಕಟ್ಟಡದ ಕೆಳ ಅಂತಸ್ತಿನಲ್ಲಿರುವ ಅಂಗಡಿಗೆ ಕಳ್ಳರು ನುಗ್ಗಿದ್ದಾರೆ.

You cannot copy contents of this page