ಅಂಗನವಾಡಿಗೆ ಮಲೆಯಾಳಿ ಅಧ್ಯಾಪಿಕೆಯ ನೇಮಕ ಹೋರಾಟ ಸಮಿತಿಯಿಂದ ನಾಳೆ ಪ್ರತಿಭಟನಾ ಧರಣಿ
ಅಡೂರು: ದೇಲಂಪಾಡಿ ಪಂಚಾ ಯತ್‌ನ ಕೋರಿಕಂಡ ಅಂಗನವಾ ಡಿಯಲ್ಲಿ ಕನ್ನಡ, ತುಳು ಪ್ರಾದೇಶಿಕ ಭಾಷೆ ತಿಳಿಯದ ಅಧ್ಯಾಪಿಕೆ ನೇಮಕಾತಿಗೆ ವಿರುದ್ಧವಾಗಿ ಅಡೂರು ಕೋರಿಕಂಡ ಅಂಗನವಾಡಿ ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ ೧೦ ಗಂಟೆಗೆ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಯಲಿದೆ. ಕನ್ನಡ ಪ್ರದೇಶದಲ್ಲಿ ಮಕ್ಕಳಿಗೆ ಬಾಲ್ಯದಲ್ಲೇ ಕನ್ನಡವನ್ನು ಇಲ್ಲವಾಗಿಸುವ ಪಂಚಾ ಯತ್ ಆಡಳಿತ ಮತ್ತು ಶಿಶು ಕಲ್ಯಾಣ ಇಲಾಖೆಯ ಹುನ್ನಾರಕ್ಕೆ ದುರಾಗಿ ಈ ಹೋರಾಟ ಹಮ್ಮಿಕೊಳ್ಳಲಾಗಿ ದೆಯೆಂ ದು ಹೋರಾಟ ಮೂಲ ತಿಳಿಸಿವೆ.
ಅಡೂರು ದೇವಾಲಯ ಪರಿಸರದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ದೇಲಂಪಾಡಿ ಗ್ರಾಮ ಪಂಚಾಯತ್ ಪರಿಸರದಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ. ಕನ್ನಡಪರ ಸಂಘಟನೆಗಳ ನೇತಾರರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಕನ್ನಡಿಗರು, ಕನ್ನಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅಂಗನವಾಡಿ ಹೋರಾಟ ಸಮಿತಿಯ ಗಂಗಾಧರ ಅಡೂರು ಹಾಗೂ ನಯನಾ ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.