ಅಂಗನವಾಡಿಯ ಆಹಾರ ಸೇವಿಸಿ ಅಸ್ವಸ್ಥಗೊಂಡು ಆರು ಮಕ್ಕಳು ಆಸ್ಪತ್ರೆಗೆ
ಕಾಸರಗೋಡು: ಅಂಗನವಾ ಡಿಯಲ್ಲಿ ವಿತರಿಸಲಾದ ಆಹಾರ ಸೇವಿಸಿ ಆರು ಮಕ್ಕಳು ಅಸ್ವಸ್ಥಗೊಂಡು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿದ ಘಟನೆ ನಡೆದಿದೆ. ಕಿನಾನೂರು ಕರಿಂದಳಂ ಪಂಚಾ ಯತ್ ಚಾಮರಕುಳ ಕೂವೆಟ್ಟಿ ಅಂಗನವಾಡಿಯಲ್ಲಿ ಇಂತಹ ಬೆಳವ ಣಿಗೆ ನಡೆದಿದೆ. ಅಂಗನವಾಡಿಯಲ್ಲಿ ಬುಧವಾರ ಸಂಜೆ ಮಕ್ಕಳಿಗೆ ರವೆ ಪಾಯಸ ವಿತರಿಸಲಾಗಿತ್ತು. ಅದನ್ನು ತಿಂದ ಮಕ್ಕಳ ಪೈಕಿ ಆರು ಮಕ್ಕಳಿಗೆ ಮರುದಿನ ವಾಂತಿ ಹಾಗೂ ಜ್ವರ ಆನುಭವಗೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ನಂತರ ನಿನ್ನೆ ಆಸ್ಪತ್ರೆಯಿಂದ ಬಿಡುಗಡೆಗೊಳಿ ಸಲಾಗಿದೆ. ಈ ಅಂಗನವಾಡಿಯಲ್ಲಿ ಎಂಟು ಮಕ್ಕಳಿದ್ದು ಇತರ ಇಬ್ಬರು ಮಕ್ಕಳಿಗೆ ಯಾವುದೇ ರೀತಿಯ ದೈಹಿಕ ಅಸ್ವಸ್ಥತೆ ಅನುಭವವಾಗಿಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.