ಅಂಡರ್‌ಪಾಸ್ ಬಳಿ ಸರ್ವೀಸ್ ರಸ್ತೆಯಲ್ಲಿ ವೇಗ ನಿಯಂತ್ರಣಕ್ಕೆ ಆಗ್ರಹ
ಉಪ್ಪಳ: ತಲಪಾಡಿಯಿಂದ ಕಾಸರಗೋಡು ತನಕ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮುಕ್ಕಾಲುಭಾಗ ಕೆಲಸಗಳು ಪೂರ್ಣಗೊಂಡಿದೆ.
ಅಲ್ಲಲ್ಲಿ ಸರ್ವೀಸ್ ರಸ್ತೆಗೆ ತಾಗಿಕೊಂಡು ಅಂಡರ್‌ಪಾಸ್ ನಿರ್ಮಿಸಲಾಗಿದೆ. ಆದರೆ ಅಂಡರ್ ಪಾಸ್ ಮೂಲಕ ಸರ್ವೀಸ್ ರಸ್ತೆಗೆ ಪ್ರವೇಶಿಸುವ ವೇಳೆ ಅಪಘಾತಕ್ಕೂ ಕಾರಣವಾಗುತ್ತಿರುವುದಾಗಿ ದೂರಲಾಗುತ್ತಿದೆ. ಅಂಡರ್‌ಪಾಸ್‌ನಿAದ ಬರುವ ವಾಹನಗಳಿಗೆ ಸರ್ವೀಸ್ ರಸ್ತೆಯಲ್ಲಿ ಅಪರಿಮಿತ ವೇಗದಲ್ಲಿ ಸಂಚರಿಸುವ ಬಸ್ ಸಹಿತ ಇತರ ವಾಹನಗಳು ಗಮನಕ್ಕೆ ಬಾರದೆ ಅಪಘಾತಕ್ಕೆ ಕಾರಣ ವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಂಡರ್‌ಪಾಸ್ ಹೊಂದಿರುವ ಸರ್ವೀಸ್ ರಸ್ತೆಯಲ್ಲಿ ವೇಗ ನಿಯಂತ್ರಕವನ್ನು ಸ್ಥಾಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕುಂಜತ್ತೂರು, ಉದ್ಯಾವರ, ಪೊಸೋಟು, ಉಪ್ಪಳ ಗೇಟ್, ಕೈಕಂಬ, ನಯÁಬಜಾರ್ ಮೊದಲಾದ ಕಡೆಗಳಲ್ಲಿ ಅಂಡರ್‌ಪಾಸ್‌ಗಳಿವೆ.