ಅಂತರ್ಜಲದಲ್ಲಿ ಹೆಚ್ಚುತ್ತಿರುವ ನೈಟ್ರೇಟ್ ಅಂಶ

ಕಾಸರಗೋಡು: ರಾಜ್ಯದ ವಿವಿಧ ಜಿಲ್ಲೆಗಳ ಅಂತರ್ಜಲದಲ್ಲಿ ನೈಟ್ರೇಟ್‌ನ ಅಂಶ ಅಪಾಯಕಾರಿ ರೀತಿಯಲ್ಲಿ ಹೆಚ್ಚುತ್ತಿದೆ ಎಂದು ಈ ಬಗ್ಗೆ ನಡೆಸಲಾದ ಅಧ್ಯಯನ ವರದಿಯಲ್ಲಿ ಸೂಚಿಸಲಾಗಿದೆ. ನೈಟ್ರೇಟ್ ಮಲೀನೀಕರಣ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊ ಡಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕೇರಳ ವಿಶ್ವವಿದ್ಯಾಲಯ ಮತ್ತು ಸೆಂಟರ್ ಫೋರ್ ವಾಟರ್ ರಿಸೋರ್ಸ್ ಡೆವಲಪ್ ಮೆಂಟ್ ಆಂಡ್ ಮೆನೇಜ್‌ಮೆಂಟ್ ಜಂಟಿಯಾಗಿ ನಡೆಸಿದ ಸಂಶೋಧನಾ ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ. ಓಪನ್ ಆಕ್ಷನ್ ಪ್ಲಾಟ್‌ಫಾಂ, ಮತ್ತು ವಾಟರ್ ರಿಸೋರ್ಸ್ ಇನ್‌ಫರ್ಮೇಶನ್ ಸಿಸ್ಟಮ್ ಮೂಲಕ ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ್ ಪ್ರಕಟಿಸಿದ 2010ರ ಮತ್ತು 2018ರ ಅಂತರ್ಜಲ ಮಾಹಿತಿಗಳನ್ನು ಪರಿಶೀಲಿಸಿ ಈ ವರದಿ  ತಯಾರಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page