ಅಂಬಲತ್ತರ ಖೋಟಾನೋಟು ಪ್ರಕರಣ ಕ್ರೈಮ್‌ಬ್ರಾಂಚ್‌ಗೆ
ಕಾಸರಗೋಡು: ಅಂಬಲತ್ತರ ಪಾರಪಳ್ಳಿ ಗುರುಪುರದ ಬಾಡಿಗೆ ಮನೆಯಿಂದ ಮಾರ್ಚ್ ೨೦ರಂದು ೨೦೦೦ ರೂ. ಮುಖಬೆಲೆಯ ೬.೯೫ ಕೋಟಿ ರೂ.ಗಳ ಖೋಟಾನೋಟು ಗಳು ಪತ್ತೆಯಾದ ಪ್ರಕರಣದ ತನಿಖೆ ಯನ್ನು ಕ್ರೈಮ್ ಬ್ರಾಂಚ್ ವಿಭಾಗಕ್ಕೆ ಹಸ್ತಾಂತರಿಸುವ ಕ್ರಮ ಆರಂಭ ಗೊಂಡಿದೆ. ಇದಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದ ಪೆರಿಯಾ ಸಿ.ಎಚ್. ಹೌಸ್‌ನ ಅಬ್ದುಲ್ ರಜಾಕ್ (೪೯) ಮತ್ತು ಬೇಕಲ ಮೌವ್ವಲ್ ಪರಂಡಾನ ವೀಟಿಲ್‌ನ ಸುಲೈಮಾನ್ (೫೨)ರನ್ನು ಪೊಲೀ ಸರು ಬಳಿಕ ಹೊಸದುರ್ಗ ನ್ಯಾಯಾ ಲಯದಲ್ಲಿ ಹಾಜರುಪಡಿಸಿದ್ದು, ಅವರಿಗೆ ನ್ಯಾಯಾಲಯ ನಂತರ ಜಾಮೀನು ಮಂಜೂರು ಮಾಡಿದೆ. ಅದರಂತೆ ಅವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ಈ ಬೆನ್ನಲ್ಲೇ ಈ ಪ್ರಕರಣದ ತನಿಖೆಯನ್ನು ಕ್ರೈಮ್‌ಬ್ರಾಂಚ್ ವಿಭಾಗಕ್ಕೆ ಹಸ್ತಾಂತರಿಸುವ ಅಗತ್ಯದ ಕ್ರಮ ಆರಂಭಿಸಲಾಗಿದೆ.