ಮಂಗಲ್ಪಾಡಿ: ಅಂಬಾರು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಗುರುಗಳ 170ನೇ ಜನ್ಮದಿನಾಚರಣೆ ಈ ತಿಂಗಳ 20ರಂದು ವಿವಿಧ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ. ಅಂದು ಬೆಳಿಗ್ಗೆ 8ಕ್ಕೆ ಗಣಹೋಮ, 10ರಿಂದ ಭಜನೆ, 11.30ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಮಂಗಲ್ಪಾಡಿ ಗುಳಿಗ ದೈವದ ಪಾತ್ರಿ ಶೇಖರ ಪೂಜಾರಿ ಅಧ್ಯಕ್ಷತೆ ವಹಿಸುವರು. ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಪ್ರೇಮ್ ಕುಮಾರ್ ಐಲ ಧಾರ್ಮಿಕ ಭಾಷಣ ಮಾಡುವರು. ಶುಭಕರ ಶೆಟ್ಟಿ ತೋಟ, ಪಂ. ಸದಸ್ಯೆ ಸುಧಾ ಗಣೇಶ್ ಉಪಸ್ಥಿತರಿರುವರು. ಪ್ರತಿಭಾ ಪುರಸ್ಕಾರ, ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.
