ಅಂಬಾರು ಶ್ರೀ ಸದಾಶಿವ ಕಲಾವೃಂದದ ಕೆಸರ್‌ಡೊಂಜಿ ದಿನ ಸೆ.1ರಂದು

ಉಪ್ಪಳ: ಅಂಬಾರು ಶ್ರೀ ಸದಾಶಿವ ಕಲಾವೃಂದ ಮಂಗಲ್ಪಾಡಿ ಇದರ ಆಶ್ರಯದಲ್ಲಿ ಎರಡನೇ ವರ್ಷದ ಕೆಸರ್‌ಡೊಂಜಿ ದಿನ ಕಾರ್ಯಕ್ರಮ ಸೆ. 1 ರಂದು ಚೆರುಗೋಳಿ ತೋಟ ಸೇನೆಮಾರ್ ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಅಂಬಾರು ಶ್ರೀ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ವಾಸುದೇವ ಮಯ್ಯ ಉದ್ಘಾಟಿಸುವರು. ಸಮಾಜ ಸೇವಕ ಗೋಪಾಲ ಸಾಲಿಯಾನ್, ಪ್ರಗತಿಪರ ಕೃಷಿಕ ತಾರನಾಥ ಶೆಟ್ಟಿ ಕನ್ಯಾನ, ಪಂಚಾಯತ್ ಸದಸ್ಯೆ ರೇವತಿ ಕಮಲಾಕ್ಷ, ಕಲಾವೃಂದದ ಗೌರವಾಧ್ಯಕ್ಷ ಕೊರಗಪ್ಪ ಶೆಟ್ಟಿ ಸಣ್ಣಹಿತ್ತಿಲು, ಅಧ್ಯಕ್ಷ ಸಮಂತ್ ಶೆಟ್ಟಿ ಹಿತ್ತಿಲು ಭಾಗವಹಿಸು ವರು. ಸಂಜೆ 5ಕ್ಕೆ ನಡೆಯುವ ಸಮಾರೋಪದಲ್ಲಿ ಅಂಬಾರು ಕ್ಷೇತ್ರದ ಆಡಳಿತ ಮೊಕ್ತೇಸರ ಎಚ್.ಕೆ ಶೆಟ್ಟಿ ಹಿತ್ತಿಲು ಅಧ್ಯಕ್ಷತೆ ವಹಿಸುವರು. ರಂಗಭೂಮಿ ಕಲಾವಿದ ಸುರೇಶ್ ಶೆಟ್ಟಿ ಜೋಡುಕಲ್ಲು, ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಾಕ್ಷ ಭರತ್ ರೈ ಕೋಡಿಬೈಲು, ಚಿತ್ತರಂಜನ್, ಪಂ.ಸದಸ್ಯೆ ಸುಧಾಗಣೇಶ್, ಪಂಜ ಶ್ರೀ ಅಯ್ಯಪ್ಪ ಮಂದಿರದ ಅಧ್ಯಕ್ಷ ರಾಮ ಚಂದ್ರ ಬಲ್ಲಾಳ್, ಪಂಜ ಶಿವ ಗಂಗಾ ಅಧ್ಯಕ್ಷ ನಿಶಾಂತ್ ಕರ್ಕೇರ, ಕೃಷ್ಣನಗರ ಶ್ರೀ ಕೃಷ್ಣ ಭಜನಾ ಸಂಘದ ಅಧ್ಯಕ್ಷ ವಿಜಯ ಕುಮಾರ್ ಎಂ.ಜಿ ಉಪಸ್ಥಿತರಿರುವರು.

RELATED NEWS

You cannot copy contents of this page