ಅಗ್ನಿದುರಂತ: ಅಗ್ನಿಶಾಮಕದಳದಿಂದ ಕಾರ್ಯಾಚರಣೆ

ಉಪ್ಪಳ: ನಾಲ್ಕು ಕಡೆಗಳಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಉಪ್ಪಳ ಅಗ್ನಿಶಾಮಕದಳ ನಡೆಸಿದ ಕಾರ್ಯಾ ಚರಣೆಯಲ್ಲಿ ಹೆಚ್ಚಿನ ಅಪಾಯ ತಪ್ಪಿದೆ. ನಿನ್ನೆ ಮಧ್ಯಾಹ್ನದಿಂದ ಸಂಜೆ ತನಕ ವಿವಿಧ ಕಡೆ ಅಗ್ನಿದುರಂತ ಉಂಟಾಗಿದೆ. ಪೈವಳಿಕೆ  ಸುಂಕದಕಟ್ಟೆಯ ಶಕೀರ್, ಪಾವೂರು ಗೇರುಕಟ್ಟೆಯ ಮುಬಾರಕ್ ಎಂಬವರ ಹಿತ್ತಿಲಿನ ಹುಲ್ಲು, ಕಾಡುಪೊದೆ, ಬಾಯಿಕಟ್ಟೆಯ ಅಬ್ದುಲ್ ಸಮದ್ ಎಂಬವರ ಬಯಲಿನಲ್ಲಿ ಹುಲ್ಲು ಬೆಂಕಿಗಾಹುತಿಯಾಗಿದೆ. ಉಪ್ಪಳ ಅಗ್ನಿಶಾಮಕದಳ ಸ್ಟೇಶನ್ ಆಫೀಸರ್ ರಾಜೇಶ್ ಹಾಗೂ ತಂಡ ಸ್ಥಳಕ್ಕೆ ತಲುಪಿ ನಡೆಸಿದ ಕಾರ್ಯಾಚ ರಣೆಯಲ್ಲಿ ಬೆಂಕಿ ಹರಡುವುದನ್ನು ತಪ್ಪಸಿದೆ. ಅಲ್ಲದೆ ನಿನ್ನೆ ಸಂಜೆ ಕುಬಣೂರಿನಲ್ಲಿ ಇತ್ತೀಚೆಗೆ ತ್ಯಾಜ್ಯ ಉರಿದ ಸ್ಥಳದಲ್ಲಿ ಮತ್ತೆ ಹೊಗೆ ಕಾಣಿಸಿಕೊಂಡಿದೆ. ಅಲ್ಲಿಗೂ ಅಗ್ನಿಶಾಮಕದಳ ತೆರಳಿ ನೀರು ಹಾಯಿಸಿ ನಂದಿಸಿದೆ.

RELATED NEWS

You cannot copy contents of this page