ಅಚ್ಯುತಾನಂದನ್‌ರಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ತಿರುವನಂತಪುರ: ಕಮ್ಯೂನಿಸ್ಟ್ ಪಕ್ಷದ ಭೀಷ್ಮಾಚಾರ್ಯರೆಂದೇ ಕರೆಯಲಾಗುತ್ತಿರುವ ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್ ಅಚ್ಯುತಾನಂದನ್ (101)ರಿಗೆ  ಹೃದಯಾಘಾತವಾಗಿದ್ದು, ಅವರನ್ನು ತಿರುವನಂತಪುರದ ಪಟ್ಟಂನ ಎಸ್‌ಯುಟಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಆರೋಗ್ಯ ಈಗ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಹೃದ್ರೋಗ ತಜ್ಞರ ತಂಡ ಅಚ್ಯುತಾನಂದನ್‌ರ ಆರೋಗ್ಯದ ಬಗ್ಗೆ ತೀವ್ರ ನಿಗಾ ಇರಿಸಿದೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅಚ್ಯುತಾನಂದನ್‌ರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಸದ್ಯ ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಕಳೆದ ಅಕ್ಟೋಬರ್ ೨೦ರಂದು ಅಚ್ಯುತಾನಂದನ್‌ರಿಗೆ 101 ವರ್ಷ ತುಂಬಿತ್ತು.

You cannot copy contents of this page