ಅಜ್ಜಿಗೆ ಇರಿತ : ಕೇಸು ದಾಖಲು
ಕಾಸರಗೋಡು: ಅಜ್ಜಿಗೆ ಇರಿದು ಗಂಭೀರ ಗಾಯಗೊಳಿಸಿದ ದೂರಿನಂತೆ ಮೊಮ್ಮಗನ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಾಸರಗೋಡು ಪಿ.ಎಸ್. ಗುಡ್ಡೆಯ ಸೋಮಾನಂದ ಎಂಬವರ ಪತ್ನಿ ಪುಷ್ಪ ಎ (85)ರಿಗೆ ಇರಿದು ಗಾಯಗೊಳಿಸಿದ ದೂರಿ ನಂತೆ ಮೊಮ್ಮಗ ಕಾಸರಗೋಡು ಪಿ.ಸಿ.ಗುಡ್ಡೆ ನಿವಾಸಿ ರಂಜಿತ್ (28)ನ ವಿರುದ್ಧ ಕೇಸು ದಾಖಲಿಸಲಾಗಿದೆ.
ನಿನ್ನೆ ಸಂಜೆ ಪಿ.ಎಸ್. ಗುಡ್ಡೆ ಯಲ್ಲಿ ಪುಷ್ಪರನ್ನು ರಂಜಿತ್ ಚಾಕು ವಿನಿಂದ ಇರಿದು ಗಾಯಗೊಳಿಸಿ ರುವುದಾಗಿ ಆತನ ಸಹೋದರ ಅಜಿತ್ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.