ಕಾಸರಗೋಡು: ಪದೇ ಪದೇ ವಿದ್ಯುತ್ ಪೂರೈಕೆ ಮೊಟಕುಗೊಳ್ಳುತ್ತಿರುವುದು ಹಾಗೂ ವಿದ್ಯುತ್ ಓವರ್ಲೋಡ್ ಧಾರಕಶಕ್ತಿ ಹೊಂದಿರುವ ವಿದ್ಯುತ್ ಸಾಮಗ್ರಿಗಳ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾಸರಗೋಡು, ಮಲಪುರಂ ಮತ್ತು ಇಡುಕ್ಕಿ ಜಿಲ್ಲೆಗಳಿಗಾಗೀ 1023.04 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಜ್ಯಾರಿಗೊಳಿಸಲು ರಾಜ್ಯ ವಿದ್ಯುನ್ಮಂಡಳಿ ತೀರ್ಮಾನಿಸಿದೆ.
ಇದರಂತೆ ಕಾಸರಗೋಡು ಜಿಲ್ಲೆ 394.15 ಕೋಟಿ ರೂ., ಮಲಪ್ಪುರಂ ಜಿಲ್ಲೆಗೆ 410.93 ಕೋಟಿ ರೂ. ಮತ್ತು ಇಡುಕ್ಕಿ ಜಿಲ್ಲೆಗೆ 217.96 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಯೋಜನೆ ಪ್ರಕಾರ 11 ಕೆ.ವಿ. ವಿದ್ಯುತ್ ಲೈನ್ ಅಳವಡಿಕೆ, ಸಬ್ ಸ್ಟೇಷನ್ಗಳ ನಿರ್ಮಾಣ, ಹೆಚ್ಚು ಧಾರಕಶಕ್ತಿ ಹೊಂದಿರುವ ಟ್ರಾನ್ಸ್ಫಾರ್ಮರ್ಗಳನ್ನು ಸ್ಥಾಪಿಸುವಿಕೆ ಹಾಗೂ ಇತರ ಹಲವು ಅಭಿವೃದ್ಧಿ ಯೋಜನೆಗಳನ್ನು ಮೂರು ಜಿಲ್ಲೆಗಳಲ್ಲಾಗಿ ಜ್ಯಾರಿಗೊಳಿಸಲಾಗುವುದು.
ವಿದ್ಯುತ್ ಲೈನ್, ಟ್ರಾನ್ಸ್ಫಾರ್ಮರ್ಗಳಲ್ಲಿ ಅಧಿಕ ವಿದ್ಯುತ್ ಲೋಡ್ ಮತ್ತು ಭೌಗೋಳಿಕ ಸಮಸ್ಯೆ ಇತ್ಯಾದಿಗಳನ್ನು ಪರಿಶೀಲಿಸಿ ಈ ಪ್ಯಾಕೇಜ್ಗೆ ರೂಪು ನೀಡಲಾಗಿದೆ. ಇದು ವಿದ್ಯುತ್ ಇಲಾಖೆ ರೂಪು ನೀಡಿರುವ ವಿಶೇಷ ಯೋಜನೆಯಾಗಿ ರುವುದರಿಂದಾಗಿ ಅದಕ್ಕಾಗಿ ವಿದ್ಯುನ್ಮಂಡಳಿಯ ನಿಧಿಯಿಂದ ಅಥವಾ ಸಾಲದ ಮೂಲಕ ಅಗತ್ಯದ ಮೊತ್ತ ಕಂಡು ಕೊಳ್ಳಲಾಗುವುದು. ರಾಜ್ಯ ವಿದ್ಯುತ್ ನಿಯಂತ್ರಣ ರೆಗ್ಯುಲೇಟರೀ (ನಿಯಂತ್ರಣ) ಪ್ರಾಧಿಕಾರದ ಶಿಫಾರಸ್ಸಿನ ಪ್ರಕಾರ ಈ ಯೋಜನೆಗೆ ರೂಪು ನೀಡಲಾಗಿದೆ.
ಆದರೆ ಪ್ರಸ್ತುತ ಯೋಜನೆ ಕೇಂದ್ರ ಇಂಧನ ಸಚಿವಾಲಯದ ಆಶ್ರಯದಲ್ಲಿರುವ ಆರ್.ಡಿ.ಎಸ್.ಎಸ್. ಯೋಜನೆಯಲ್ಲಿ ಒಳಪಟ್ಟಿಲ್ಲ. ಆದ್ದರಿಂದ ರೂರಲ್ ಇಲೆಕ್ಟ್ರಿಫಿಕೇಶನ್ ಕಾರ್ಪರೇಷನ್ ಲಿಮಿಟೆಡ್ (ಗ್ರಾಮೀಣ ವಿದ್ಯುತ್ತೀಕರಣ ನಿಗಮ ನಿಯಮಿತ) ಸೇರಿದಂತೆ ಇಂಧನ ವಲಯದಲ್ಲಿ ಕಾರ್ಯವೆಸಗುತ್ತಿರುವ ಕೇಂದ್ರ ಸಂಸ್ಥೆಗಳಿAದ ಈ ಯೋಜನೆಗಾಗಿ ಸಾಲ ಪಡೆಯಬೇಕಾಗಿಬರಲಿದೆ.
