ಅಡವಿರಿಸಿದ ಚಿನ್ನ ಪಡೆದು ಮಾರಾಟಗೈದು ವಂಚನೆ ಕೇಸು ದಾಖಲು
ಕಾಸರಗೋಡು: ಅಡವಿರಿಸಿದ ಚಿನ್ನ ಪಡೆದು ಮಾರಾಟ ಮಾಡಿದ ನಂತರ ಅದರ ಮೊತ್ತ ವಾದ ೫.೫೫ ಲಕ್ಷ ರೂ. ನೀಡದೆ ವಂಚನೆಗೈದಿರುವುದಾಗಿ ಆರೋ ಪಿಸಿ ನೀಡಲಾದ ದೂರಿನಂತೆ ಆನ್‌ಲೈನ್ ಚ್ಯಾನಲ್ ಮಾಲಕನ ವಿರುದ್ಧ ಕಾಸರಗೋಡು ಪೊಲೀ ಸರು ಪ್ರಕರಣ ದಾಖಲಿಸಿದ್ದಾರೆ.
ಮೊಗ್ರಾಲ್ ರೆಹ್ಮತ್ ನಗರ ತಾಹಿರಾ ಮಂಜಿಲ್‌ನ ಕೆ. ಯೂಸಫ್ ಎಂಬವರು ಈ ಬಗ್ಗೆ ನೀಡಿದ ದೂರಿನಂತೆ ಖತ್ತರ್‌ನಲ್ಲಿ ಆನ್‌ಲೈನ್ ಚ್ಯಾನೆಲ್ ನಡೆಸು ತ್ತಿರುವ ಕಾಸರಗೋಡು ನೇಶನಲ್ ನಗರ ನಿವಾಸಿ ಸುಬೈರ್ (ಜುಬೈರ್) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿತ್ತು. ತನ್ನ ಸ್ನೇಹಿತ ಝುಬೈರ್ ಎಂಬಾತ ಅಡವಿರಿಸಿದ ಚಿನ್ನವನ್ನು ಹಿಂತೆಗೆದು ನೀಡಲು ತಾನು ಆರೋಪಿಗೆ 6.30 ಲಕ್ಷ ರೂ. ನೀಡಿದ್ದನೆಂದೂ, ಅದರಂತೆ ಆರೋಪಿ ಚಿನ್ನವನ್ನು ಹಿಂತೆಗೆದು ತನಗೆ 75,000 ರೂ. ನೀಡಿದ್ದು ಬಾಕಿ ಹಣವನ್ನು ಆತ ತನಗೆ ಹಿಂತಿರುಗಿಸದೆ ವಂಚಿಸಿರುವುದಾಗಿ ಪೊಲೀಸರು ನೀಡಿದ ದೂರಿನಲ್ಲಿ ಯೂಸುಫ್ ಆರೋಪಿಸಿದ್ದಾರೆ. ಪೊಲೀಸರು ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.