ಅಡೂರಿನಲ್ಲಿ ಬೃಹತ್ ಬೀಟಿ ಮರ ಕಡಿದು ಸಾಗಾಟ: ಆದೂರು ಪೊಲೀಸರಿಂದ ತನಿಖೆ
ಅಡೂರು: ಇಲ್ಲಿನ ವ್ಯಕ್ತಿಯೋರ್ವರ ಹಿತ್ತಿಲಿನಲ್ಲಿ ಅರಣ್ಯ ಇಲಾಖೆ ರಿಸರ್ವ್ ಮಾಡಿಟ್ಟಿದ್ದ ಬೃಹತ್ ಬೀಟಿ ಮರವನ್ನು ಕಡಿದು ಸಾಗಿಸಲಾಗಿದೆ. ಅಡೂರು ವಿಲ್ಲೇಜ್ ಆಫೀಸರ್ ಕೆ. ನೀಲಕಂಠನ್ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಅಡೂರು ಪಯರಡ್ಕದ ಕೃಷ್ಣ ನಾಯ್ಕ್‌ರ ಮಾಲಕತ್ವದಲ್ಲಿರುವ ಸ್ಥಳದಿಂದ ಮರವನ್ನು ಕಡಿದು ಸಾಗಿಸಲಾಗಿದೆ. 3.10 ಮೀಟರ್ ಸುತ್ತಳತೆಯ ಹಾಗೂ 9 ಮೀಟರ್ ಎತ್ತರದ ಹಲವಾರು ವರ್ಷಗಳ ಹಳಮೆಯಿರುವ ಬೀಟಿಮರವನ್ನು ಕಡಿದು ಸಾಗಿಸಲಾಗಿದೆ. ಲಕ್ಷಾಂತರ ರೂ. ಬೆಲೆಬಾಳುವ ಮರವನ್ನು ಕಳವುಗೈಯ್ಯಲಾಗಿದೆ.