ಉಪ್ಪಳ: ಅಡ್ಕ ಶ್ರೀ ಐವರ್ ಭಗವತೀ ಕ್ಷೇತ್ರದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಪೂರ್ವಾಹ್ನ ಮೇಲೇರಿ ಕೂಡಿಸುವುದು, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಭಂಡಾರ ಆರೋಹಣ, ರಾತ್ರಿ ಮೇಲೇರಿಗೆ ಅಗ್ನಿಸ್ಪರ್ಶ, ಊರ ಮಕ್ಕಳ ಕುಣಿತ ಭಜನೆ, ಕುಳಿಚ್ಚಾಟಂ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಅಭಿನಯದ ‘ಕಥೆ ಎಡ್ಡೆಂಡು’ ನಾಟಕ ಪ್ರದರ್ಶನ, ಕೆಂಡಸೇವೆ ಜರಗಿತು.
