ಅಣಂಗೂರಿನ ಪ್ಲೈವುಡ್ ಮಾಲ್‌ನಲ್ಲಿ ಬೆಂಕಿ ಅನಾಹುತ
ಕಾಸರಗೋಡು: ನಗರದ ಅಣಂಗೂರಿ ನಲ್ಲಿರುವ ಎಂ.ಆರ್.ಸಿ. ಪ್ಲೈವುಡ್ ಮಾಲ್ ನಲ್ಲಿ ನಿನ್ನೆ ಬಾರೀ ಬೆಂಕಿ ಅನಾಹುತ ಸಂಭವಿಸಿದೆ. ಈ ಮಾಲ್‌ನೊಳಗಿದ್ದ ಪಿವಿಸಿ ಬೋರ್ಡ್ ಗಳು ಜಿಪ್ಸಂ ಬೋರ್ಡ್‌ಗಳು, ಪ್ಲೈವುಡ್ ಹಾಗೂ ಇತರ ಸಾಮಗ್ರಿಗಳೆಲ್ಲವೂ ಬೆಂಕಿಗಾಹುತಿ ಯಾಗಿವೆ. ಈ ಬಗ್ಗೆ ನೀಡಲಾದ ಮಾಹಿತಿ ಯಂತೆ ಕಾಸರಗೋಡು ಅಗ್ನಿಶಾಮಕ ದಳದ ಎರಡು ಯೂನಿಟ್ ತಂಡ ತಕ್ಷಣ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಸತತವಾಗಿ ನೀರು ಹಾಯಿಸುವ ಮೂಲಕ ಬೆಂಕಿ ನಂದಿಸಿದರು. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾ ಲ್‌ರ ನೇತೃತ್ವದಲ್ಲಿ ಫಯರ್ ಆಂಡ್ ರೆಸ್ಕ್ಯೂ ಆಫೀಸರ್‌ಗಳಾದ ಇ. ಪ್ರಸಾದ್, ಸಿ.ವಿ. ಶಿಬಿನ್ ಕುಮಾರ್, ಎಸ್. ಅಭಿಲಾಷ್, ಜಿತು ಥೋಮಸ್ ಹೋಮ್‌ಗಾರ್ಡ್ ಗಳಾದ ಟಿ.ವಿ. ಪ್ರವೀಣ್, ವಿ.ವಿ. ಉಣ್ಣಿಕೃಷ್ಣನ್, ಪಿ. ರಂಜಿತ್ ಮತ್ತು ಕೆ.ವಿ. ಶ್ರೀಜಿತ್ ಎಂಬಿವ ರನ್ನೊಳಗೊಂಡ ಅಗ್ನಿಶಾಮಕದಳದ ತಂಡ ಬೆಂಕಿ ನಂದಿಸಿದೆ. ಪ್ಲೈವುಡ್ ಮಾಲ್ ಪಕ್ಕದಲ್ಲಿ ತ್ಯಾಜ್ಯಗಳನ್ನು ರಾಶಿ ಹಾಕಿ ಹೊತ್ತಿಸುವುದು ಇತ್ತೀಚೆಗೆ ಸಾಮಾನ್ಯ ವಾಗಿದೆ. ಹೀಗೆ ತ್ಯಾಜ್ಯಗಳಿಗೆ ಕಿಚ್ಚಿರಿಸಿದ ವೇಳೆ ಅದರಿಂದ ಬೆಂಕಿ ಕಿಡಿ ಪ್ಲೈವುಡ್ ಮಾಲ್‌ಗೆ ಹಾರಿ ಅದರಿಂದ ಬೆಂಕಿ ತಗಲಿರಬ ಹುದೆಂದು ಶಂಕಿಸಲಾಗುತ್ತಿದೆ. ಈ ಬೆಂಕಿ ಅನಾಹುತದಿಂದ ಲಕ್ಷಾಂತರ ರೂ.ಗಳ ನಷ್ಟ ಲೆಕ್ಕಹಾಕಲಾಗಿದೆ.