ವರ್ಕಾಡಿ: ಧರ್ಮನಗರ ಬಳಿಯ ತಿಮ್ಮಂಗೂರು ಅಣಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ನವೀಕೃತ ಶಿಲಾಮಯ ಗರ್ಭಗೃಹದಲ್ಲಿ ವಿಗ್ರಹ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇಂದು ಸಮಾಪ್ತಿಗೊಳ್ಳಲಿದೆ. ನಿನ್ನೆ ಸಂಜೆ ಮಜೀರ್ಪಳ್ಳದಿಂದ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆದಿದ್ದು, ಬಳಿಕ ವಿವಿಧ ವೈದಿಕ ಕಾರ್ಯಕ್ರಮ ಜರಗಿತು. ಇಂದು ಬೆಳಿಗ್ಗೆ ಮಹಾಗಣ ಪತಿಹೋಮ, ಬ್ರಹ್ಮಕಲಶಪೂಜೆ, ದೇವರ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ ನಡೆಯಲಿದೆ.
