ಅಣೆಕಟ್ಟುಗಳ ಸನಿಹ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ನಿಯಂತ್ರಣ

ಕಾಸರಗೋಡು: ರಾಜ್ಯ ಜಲ ಸಂಪನ್ಮೂಲ ಇಲಾಖೆಗೆ ಒಳಪಟ್ಟ ಅಣೆಕಟ್ಟುಗಳ ಪರಿಸರದಲ್ಲಿ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರಕಾರ ನಿಯಂತ್ರಣ ಹೇರಿದೆ. ಅಣೆಕಟ್ಟುಗಳು ಹೊಂದಿರುವ ಸ್ಥಳವನ್ನು ಎರಡು ವಲಯಗಳಲ್ಲಾಗಿ ವಿಂಗಡಿಸಿ ಇಂತಹ ನಿಯಂತ್ರಣ ತರಲಾ ಗಿದೆ. ಇದರಂತೆ ಅಣೆಕಟ್ಟುಗಳಿಗೆ ಸೇರಿಕೊಂಡಿರುವ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸಲು ಅನುಮದಿ ನೀಡಿವುದಿಲ್ಲ. ಹಾಗೂ ಇನ್ನು ಅಣೆಕಟ್ಟಿಗಿಂತ 100 ಮೀ ಟರ್‌ಗಿಂತಲೂ ದೂರದ ಪ್ರದೇಶದಲ್ಲಿ ಅಣೆಕಟ್ಟಿನ ಭದ್ರತೆಗೆ ಯಾವುದೇ ರೀತಿಯ ಅಪಾಯ ಉಂಟಾಗದ ರೀತಿಯ ನಿಯಂತ್ರಣ ದೊಂದಿಗೆ  ಮಾತ್ರವೇ ಕಟ್ಟಡ ನಿಯಂತ್ರಣಕ್ಕೆ ಅನುಮತಿ ನೀಡಲಾಗುವುದು.

RELATED NEWS

You cannot copy contents of this page