ಅತ್ತಿಕ್ಕಾವು ಶ್ರೀ ರಕ್ತೇಶ್ವರಿ ಪರಿವಾರ ದೈವಗಳ ಸಾನಿಧ್ಯ: ಬಾಲಾಲಯ ಪ್ರತಿಷ್ಠೆ 3ರಂದು
ಕೂಡ್ಲು: ಸೂರ್ಲು ಅತ್ತಿಕ್ಕಾವು ಎಂಬ ವನಪ್ರದೇಶದಲ್ಲಿ ಆರಾಧಿಸಿಕೊಂಡು ಬರುತ್ತಿರುವ ವನಶಾಸ್ತಾವು, ವನದುರ್ಗೆ ಕ್ಷೇತ್ರದಲ್ಲಿ ಬಾಲಾಲಯ ಪ್ರತಿಷ್ಠೆ ಈ ತಿಂಗಳ 3ರಂದು ಬೆಳಿಗ್ಗೆ 9.45ಕ್ಕೆ ನಡೆಯಲಿದೆ.
ಸುಮಾರು 38 ವರ್ಷಗಳಿಂದ ಈ ಸಾನಿಧ್ಯದಲ್ಲಿ ತಂಬಿಲ ಹಾಗೂ ಕೋಲವನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ನಡೆಸಿದ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ ಜೀರ್ಣ ಸ್ಥಿತಿಯ ಲ್ಲಿರುವ ದೇವಸ್ಥಾನವನ್ನು ಪುನರುದ್ಧಾ ರಗೊಳಿಸಬೇಕೆಂದು ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಬಾಲಾಲಯ ಪ್ರತಿಷ್ಠೆ ನಡೆಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಜೀರ್ಣೋದ್ಧಾರ ಸಮಿತಿ ತಿಳಿಸಿದೆ.