ಅಧ್ಯಾಪಿಕೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಅಧ್ಯಾಪಿಕೆಯೋ ರ್ವೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನುಳ್ಳಿಪ್ಪಾಡಿ ನಿವಾಸಿ ಗಲ್ಫ್ ಉದ್ಯೋಗಿಯಾದ ಸುರೇಶ ಎಂಬವರ ಪತ್ನಿ ಮಮತ (42) ಮೃತಪಟ್ಟ ಅಧ್ಯಾಪಿಕೆ. ಇವರು ಕಾಸರಗೋಡಿನ ಚೈತನ್ಯ ವಿದ್ಯಾಲಯದ ಅಧ್ಯಾಪಿಕೆಯಾಗಿದ್ದರು. ಈ ಹಿಂದೆ ಹಲವು ವರ್ಷಗಳ ಕಾಲ ಕಾಸರಗೋಡಿನ ಲಕ್ಷ್ಮೀ ವೆಂಕಟೇಶ ವಿದ್ಯಾಲಯದಲ್ಲಿ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸಿದ್ದರು. ಇವರು ಮೊನ್ನೆ   ಮಂಗಳೂರಿನಲ್ಲಿರುವ ತಾಯಿಮನೆಗೆ  ತೆರಳಿದ್ದರು. ಸಂಜೆ ವೇಳೆ ಇವರು ಅಲ್ಲಿ ನೇಣು ಬಿಗಿದ  ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ನಿನ್ನೆ ನುಳ್ಳಿಪ್ಪಾಡಿಯ ಮನೆಗೆ ತಲುಪಿಸಿ ಚೆನ್ನಿಕ್ಕರೆ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಮಮತರ ನಿಧನದ ಸುದ್ದಿ ತಿಳಿದು ಗಲ್ಫ್‌ನಲ್ಲಿದ್ದ ಪತಿ ಸುರೇಶ ಊರಿಗೆ ಆಗಮಿಸಿದ್ದಾರೆ. ಮೃತರು ಪತಿ, ಮಕ್ಕಳಾದ ವಿಷ್ಣು, ವೈಷ್ಣವಿ (ವಿದ್ಯಾರ್ಥಿಗಳು), ತಾಯಿ, ನಾಲ್ವರು ಸಹೋದರಿಯರು, ಇಬ್ಬರು ಸಹೋದರರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page