ಅನಧಿಕೃತವಾಗಿ ಕಡಿದು ಸಾಗಿಸುತ್ತಿದ್ದ ೫ ಲಕ್ಷ ರೂ.ಮೌಲ್ಯದ ಮರ ವಶ
ಮುಳ್ಳೇರಿಯ: ಅನಧಿಕೃತವಾಗಿ ಕಡಿದು ಸಾಗಿಸುತ್ತಿದ್ದ ೫ ಲಕ್ಷ ರೂಪಾಯಿ ಮೌಲ್ಯದ ಮರಗಳನ್ನು ಆದೂರು ಪೊಲೀಸರು ವಶಪಡಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ವಶಪಡಿಸಿಕೊಂಡಿರುವವುಗಳಲ್ಲಿ ತೇಗು ಹಾಗೂ ಹಲಸು ಮರಗಳು ಒಳಗೊಂ ಡಿವೆ. ಮಲೆನಾಡು ಹೆದ್ದಾರಿಯಲ್ಲಿ ಪಡ್ಯತ್ತಡ್ಕದಲ್ಲಿರುವ ಮರಗಳನ್ನು ಕಡಿದು ಸಾಗಿಸಲಾಗುತ್ತಿತ್ತು. ನಾಲ್ಕು ದಿನಗಳ ಹಿಂದೆಯೇ ಈ ಮರಗಳನ್ನು ಕಡಿದು ಹಾಕಲಾಗಿತ್ತು. ಅದನ್ನು ಸೀತಾಂ ಗೋಳಿಯ ತಂಡವೊಂದರ ಸಹಾಯದಿಂದ ನಿನ್ನೆ ರಾತ್ರಿ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಈ ವಿಷಯ ಆದೂರು ಎಸ್ಐ ಅನುರೂಪ್ಗೆ ಲಭಿಸಿತ್ತು. ಕೂಡಲೇ ಅವರು ಕಾರ್ಯಾಚರಣೆ ನಡೆಸಿ ಮರ ಹಾಗೂ ಲಾರಿಯನ್ನು ವಶಪಡಿಸಿ ಕೊಂಡಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದರಂತೆ ಕಾಸರಗೋಡಿನಿಂದ ತಲುಪಿದ ಫಾರೆಸ್ಟ್ ರೇಂಜ್ ಅಧಿಕಾರಿಗಳು ಮರಗಳನ್ನು ವಶಕ್ಕೆ ತೆಗೆದುಕೊಂಡಿ ದ್ದಾರೆ. ಮರ ಸಾಗಾಟ ಬಗ್ಗೆ ತನಿಖೆ ನಡೆಸಲಾಗುವುದೆಂದು ಅರಣ್ಯಾಧಿಕಾರಿ ವಿನೋದ್ ಕುಮಾರ್ ತಿಳಿಸಿದ್ದಾರೆ.