ಅನಧಿಕೃತ ಕಡವುಗಳು ವ್ಯಾಪಕ ಅಧಿಕಾರಿಗಳು ಮೌನ-ಆರೋಪ
ಕುಂಬಳೆ: ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವುದರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವುದಾಗಿ ಹೇಳುತ್ತಿರುವಾಗಲೇ ಹಲವೆಡೆ ಹೊಳೆಗಳಲ್ಲಿ ಅನಧಿಕೃತವಾಗಿ ಕಡವುಗಳು ಕಾರ್ಯಾಚರಿಸುತ್ತಿವೆ ಎಂದು ನಾಗರಿಕರು ದೂರುತ್ತಿದ್ದಾರೆ.
ಶಿರಿಯಾ ವಳಯತ್ತ್ ಎಂಬಲ್ಲಿ ಹನ್ನೆರಡರಷ್ಟು ಅನಧಿಕೃತ ಕಡವುಗಳಿವೆ. ಅಲ್ಲಿ ಹೊಯ್ಗೆ ಸಂಗ್ರಹಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳೂ ಇವೆ. ಪ್ರತೀ ಕಡವಿನಿಂದ ಹತ್ತರಷ್ಟು ಎಂಬಂತೆ ಸುಮಾರು 120 ಲೋಡ್ ಹೊಯ್ಗೆ ದಿನಂಪ್ರತಿ ಸಾಗಾಟವಾಗುತ್ತಿದೆ. ರಾತ್ರಿ 10ರಿಂದ ಬೆಳಿಗ್ಗೆ 9 ಗಂಟೆ ವರೆಗೆ ಹೊಯ್ಗೆ ಸಾಗಾಟ ಲಾರಿಗಳ ಸಂಚಾರ ಕಂಡುಬರುತ್ತಿದೆ. ಹಗಲು-ರಾತ್ರಿ ಕಡವುಗಳು ಕಾರ್ಯಾಚರಿಸುತ್ತಿದ್ದರೂ ಆ ಭಾಗಕ್ಕೆ ಪೊಲೀಸರಾಗಲೀ, ಇತರ ಅಧಿಕಾರಿಗಳಾಗಲೀ ಕಣ್ಣು ಹಾಯಿಸುತ್ತಿಲ್ಲ. ರಸ್ತೆಯಲ್ಲಿ ಕಂಡ ಲಾರಿಗಳು ಮಾತ್ರವೇ ತಡೆದು ನಿಲ್ಲಿಸಿ ತಪಾಸಣೆ ನಡೆಸಲಾಗುತ್ತಿದೆಯೆಂದೂ ದೂರಲಾಗಿದೆ.