ಅನಧಿಕೃತ ಮೊಬೈಲ್ ಟವರ್: ಸ್ಥಳೀಯರಿಂದ ವಿರೋಧ

ಮಂಜೇಶ್ವರ: ಪಂಚಾಯತ್‌ನ 19ನೇ ವಾರ್ಡ್ ಉದ್ಯಾವರ ಜುಮಾ ಮಸೀದಿ ಪರಿಸರದಲ್ಲಿ ಅನುಮತಿರಹಿತವಾಗಿ ಮೊಬೈಲ್ ಟವರೊಂದು ತಲೆಯೆ ತ್ತುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಪಂಚಾಯತ್‌ನ ಅತ್ಯಂತ ಹೆಚ್ಚು ಜನಸಾಂಧ್ರತೆ ಇರುವ ಸ್ಥಳ ಇದಾಗಿದ್ದು, ರಾತ್ರಿ ವೇಳೆಗಳಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಟವರ್‌ನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊಬೈಲ್ ಟವರ್‌ನಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗುವ ಭೀತಿ ವ್ಯಕ್ತಪಡಿಸಿದ ಪರಿಸರದ ಜನರು ಪ್ರಕೃತಿಗೂ ಇದರಿಂದ ಹಾನಿ ಉಂಟಾಗಲಿದ್ದು, ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಿ ಟವರ್ ನಿರ್ಮಾಣ ತಡೆಯಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಸೈಫುಲ್ಲ ತಂಙಳ್ ಯು.ಕೆ, ಮುಕ್ತಾರ್ ಎ, ಜೀವನ್, ಕುಂಞಹಮ್ಮದ್, ಮೊಯ್ದೀನ್ ಕುಂಞಿ ಮೊದಲಾದವರು ಜಿಲ್ಲಾಧಿಕಾರಿ ಹಾಗೂ ಎಡಿಎಂಗೆ ಮನವಿ ಸಲ್ಲಿಸಿದ್ದಾರೆ.

RELATED NEWS

You cannot copy contents of this page