ಅನಧಿಕೃತ ಸೊತ್ತು ಖರೀದಿ ದೂರಿನಲ್ಲಿ ಕ್ರಮ: ಸಿಪಿಎಂ ಚೆರ್ವತ್ತೂರು ಏರಿಯಾ ಕಾರ್ಯದರ್ಶಿ ಮಾಧವನ್ ಮಣಿಯರ ತೆರವು

ಕಾಸರಗೋಡು: ಸಿಪಿಎಂ ಚೆರ್ವ ತ್ತೂರು ಏರಿಯಾ ಕಾರ್ಯದರ್ಶಿ ಹುದ್ದೆ ಯಿಂದ ಮಾಧವನ್ ಮಣಿಯರನನ್ನು ತೆರವುಗೊಳಿಸಲಾಗಿದೆ. ಕೆ. ಬಾಲಕೃಷ್ಣನ್ ಕಾರಕ್ಕಾಡ್ ಹೊಸ ಏರಿಯಾ ಕಾರ್ಯ ದರ್ಶಿಯಾಗಿದ್ದಾರೆ. ಸೊತ್ತು ಖರೀದಿಗೆ ಸಂಬಂಧಿಸಿ ಆರೋಪ ಮೂಡಿಬಂದ ಹಿನ್ನೆಲೆಯಲ್ಲಿ  ಈ ಕ್ರಮ ಕೈಗೊಳ್ಳಲಾ ಗಿದೆ. ಜಿಲ್ಲಾ ಸಮಿತಿ ಸಭೆಯಲ್ಲಿ ಮಾಧವನ್ ಮಣಿಯರ ವಿರುದ್ಧ ದೂರು ಮೂಡಿಬಂದಿತ್ತು. ನಿನ್ನೆ ನಡೆದ ಏರಿಯಾ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸಿಪಿಎಂ ರಾಜ್ಯ ಸೆಕ್ರೆಟ ರಿಯೇಟ್ ಸದಸ್ಯ ಎಂ.ವಿ. ಜಯ ರಾಜ್‌ರ ಉಪಸ್ಥಿತಿಯಲ್ಲಿ ಸಭೆ ನಡೆದಿತ್ತು. ಸ್ಥಳ ಖರೀದಿಯಲ್ಲಿ ಪಕ್ಷದ ಮಾನದಂಡ ವನ್ನು ಪಾಲಿಸದಿರುವುದು  ಹುದ್ದೆಯಿಂದ ತೆರವುಗೊಳಿಸಲು ಕಾರಣವೆಂದು ಸಿಪಿಎಂ ವಿವರಣೆ ನೀಡಿದೆ.

ಪ್ರಸ್ತುತ ನೀಲೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಕೂಡಾ ಆಗಿರುವ ಮಾಧವನ್ ಮಣಿಯರ ಚೆರ್ವತ್ತೂರು ಪಂ. ಅಧ್ಯಕ್ಷನಾಗಿರುವಾಗ ನಡೆಸಿದ ಸೊತ್ತು ವ್ಯವಹಾರಕ್ಕೆ ಸಂಬಂಧ ಪಟ್ಟು ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ೫ ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಸೊತ್ತು ಅಥವಾ ವಾಹನ ಖರೀದಿಸುವ ಮುಖಂಡರು ಈ ವಿಷಯವನ್ನು ಪ್ರಥಮ ವಾಗಿ ಪಕ್ಷಕ್ಕೆ ತಿಳಿಸಿ ಅನುಮತಿ ಪಡೆಯಬೇಕಾಗಿದೆ ಎಂಬುದು ಪಕ್ಷದ ರೀತಿ. ಆದರೆ ಕರಿಂದಳದಲ್ಲಿ ಗೆಳೆಯ ನೊಂದಿಗೆ ಸೇರಿ ಎರಡೂವರೆ ಎಕ್ರೆ ಸ್ಥಳ ಖರೀದಿಸಿರುವುದರಲ್ಲಿ ಮಾಧವನ್ ಮಣಿಯರ ಪಾರ್ಟಿ ಅನುಮತಿ ಪಡೆದಿ ರಲಿಲ್ಲ. 12.5 ಲಕ್ಷ ರೂ.ನಂತೆ ಒಟ್ಟು 25 ಲಕ್ಷ ರೂ.ಗೆ ಮಾಧವನ್ ಹಾಗೂ ಗೆಳೆಯ ಸೇರಿ  ಸ್ಥಳ ಖರೀದಿಸಿದ್ದಾರೆ. ಈ ಬಗ್ಗೆ ಪಕ್ಷದಲ್ಲಿ ಆರೋಪ ಮೂಡಿ ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

You cannot copy contents of this page