ಅನಧಿಕೃತ ಹೊಯ್ಗೆ ಸಂಗ್ರಹ: 12 ದೋಣಿ ವಶ

ಕುಂಬಳೆ: ಅನಧಿಕೃತ ಹೊಯ್ಗೆ ಸಂಗ್ರಹ ತಂಡ ಹೊಳೆಯಲ್ಲಿ ಮುಳುಗಿಸಿಟ್ಟಿದ್ದ 12 ದೋಣಿಗಳನ್ನು ಪೊಲೀಸರು ಮೇಲಕ್ಕೆತ್ತಿ  ದಡಕ್ಕೆ ತಲುಪಿಸಿದ ಬಳಿಕ ಜೆಸಿಬಿ ಬಳಸಿ ನಾಶಗೊಳಿಸಿದರು. ಶಿರಿಯ ಹೊಳೆಯ ಒಳಯಂ ಎಂಬಲ್ಲಿ ನಿನ್ನೆ ಕುಂಬಳೆ ಪೊಲೀಸರು ದಾಳಿ ನಡೆಸಿ ಹೊಯ್ಗೆ ಸಂಗ್ರಹಕ್ಕೆ ಬಳಸುವ ದೋಣಿಗಳನ್ನು ಪತ್ತೆಹಚ್ಚಿದ್ದಾರೆ. ಮಂಜೇಶ್ವರ ವಲಯದಲ್ಲಿ ಅನಧಿಕೃತ ಹೊಯ್ಗೆ ಸಂಗ್ರಹ, ಸಾಗಾಟ ವ್ಯಾಪಕವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಠಿಣ ಕ್ರಮಗಳಿಗೆ ಮುಂದಾ ಗಿದ್ದಾರೆ.  ಶಿರಿಯ ಒಳಯಂನಲ್ಲಿ  ಹೊಯ್ಗೆ ಸಂಗ್ರಹ, ಸಾಗಾಟ ತೀವ್ರ ಗೊಂಡಿದ್ದು, ಹೊಯ್ಗೆ ಮಾಫಿಯಾಗಳು ಜನರಿಗೆ ಬೆದರಿಯೊ ಡ್ಡುತ್ತಿರುವುದಾಗಿ ಲಭಿಸಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು  ಅಲ್ಲಿಗೆ ದಾಳಿ ನಡೆಸಿದ್ದಾರೆ.  ಈ ವೇಳೆ ದೋಣಿಗಳನ್ನು ಹೊಳೆ ನೀರಿನಲ್ಲಿ ಮುಳಿಗಿಸಿಟ್ಟಿರುವುದು ಕಂಡುಬಂದಿದೆ. ಎಸ್.ಐ ವಿಪಿನ್, ಅಡಿಶನಲ್ ಎಸ್‌ಐ ಉಮೇಶ್ ಎಂಬಿವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

RELATED NEWS

You cannot copy contents of this page