ಅನಧಿಕೃತ ಹೊಯ್ಗೆ ಸಾಗಾಟ: ಲಾರಿ ಚಾಲಕನ ಸೆರೆ

ಕುಂಬಳೆ: ವಳಯಂ ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿ ಸಾಗಿಸುತ್ತಿದ್ದ ಒಂದು ಲೋಡ್ ಹೊಯ್ಗೆಯನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆ ವೇಳೆ ಹೊಯ್ಗೆ ಸಾಗಾಟ ಪತ್ತೆಯಾಗಿದೆ. ಈ ಸಂಬಂಧ ಲಾರಿ ಚಾಲಕನಾದ ಉಪ್ಪಳ ನಯಾಬಜಾರ್‌ನ ಚಾವೇಝ್ (18) ಎಂಬಾತನನ್ನು ಬಂಧಿಸಿದ್ದಾರೆ.

ಕಳೆದ 10 ದಿನಗಳಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಮೂರು ಹೊಯ್ಗೆ ಕಡವುಗಳ  ಮಾಲಕರ ವಿರುದ್ಧ ಕೇಸು ದಾಖಲಿಸಲಾಗಿದೆ. ಅದೇ ರೀತಿ ಹೊಯ್ಗೆ ಸಾಗಿಸುತ್ತಿದ್ದ ೬ ಟಿಪ್ಪರ್‌ಲಾರಿಗಳನ್ನು ವಶಪಡಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page