ಅನಿರ್ಧಿಷ್ಟಾವಧಿ ಬಸ್ ಮುಷ್ಕರ ಹಿಂತೆಗೆತ

ಕೊಚ್ಚಿ: ಈ ತಿಂಗಳ ೨೧ರಿಂದ ನಡೆಸಲು ನಿರ್ಧರಿಸಿದ್ದ ಅನಿರ್ಧಿಷ್ಟಾವಧಿ ಬಸ್ ಮುಷ್ಕರದಿಂದ ಖಾಸಗಿ ಬಸ್ ಮಾಲಕರ  ಸಂಯುಕ್ತ ಸಮಿತಿ ಹಿಂಜರಿದಿದೆ. ಸಾರಿಗೆ ಸಚಿವ ಆಂಟನಿ ರಾಜು ಅವರೊಂದಿಗೆ  ಎರ್ನಾಕುಳಂನಲ್ಲಿ ನಡೆದ ಚರ್ಚೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ೧೪೯ ಕಿಲೋ ಮೀಟರ್‌ಗಿಂತ ಹೆಚ್ಚು ದೂರ ಸಂಚಾರ ನಡೆಸುತ್ತಿದ್ದ ಬಸ್‌ಗಳ ಪರ್ಮಿಟ್ ರದ್ದುಗೊಳಿಸಿದ ಕ್ರಮವನ್ನು ಮರುಪರಿಶೀಲಿಸುವುದಾಗಿ ಸಚಿವ ಭರವಸೆ ನೀಡಿದ್ದಾರೆಂದು ಬಸ್ ಮಾಲಕರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಪ್ರಯಾಣದರ ಹೆಚ್ಚಳ ಬಗ್ಗೆ ರಘುರಾಮನ್ ಆಯೋಗದ ವರದಿ ಲಭಿಸಿದ ಬಳಿಕ ನಿರ್ಧರಿಸುವುದಾಗಿ ಸಚಿವ ತಿಳಿಸಿದ್ದಾರೆ. ಡಿಸೆಂಬರ್ ೩೧ರೊಳಗೆ ವರದಿ ಲಭಿಸಲಿದೆ. ಖಾಸಗಿ ಬಸ್‌ನಲ್ಲಿ ಪ್ರಯಾಣ ರಿಯಾಯಿತಿ ನೀಡುವ ವಯೋಮಿತಿಯನ್ನು ೨೭ ವರ್ಷವಾಗಿ ನಿಗದಿಪಡಿಸಲಾಗುವುದು. ಇದು ಜನವರಿ ೧ರಿಂದ ಜ್ಯಾರಿಗೆ ಬರಲಿದೆ.  ಇದೇ ವೇಳೆ ನವಂಬರ್ ೧ರಿಂದ ಫಿಟ್ನೆಸ್ ಟೆಸ್ಟ್‌ಗೆ ಬರುವ ಬಸ್‌ಗಳಲ್ಲಿ ಸೀಟ್ ಬೆಲ್ಟ್ ಹಾಗೂ ಕ್ಯಾಮರಾ ಅಳವಡಿಸಿರಬೇಕೆಂಬ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.  ಬಸ್‌ನೊಳಗೆ ಮುಂಭಾಗ, ಹಿಂಭಾಗ, ಮಧ್ಯಭಾಗದ ದೃಶ್ಯಗಳು  ಸಂಗ್ರಹವಾಗುವ ರೀತಿಯಲ್ಲಿ ಎರಡು ಕ್ಯಾಮರಾಗಳನ್ನು ಅಳವಡಿಸಿದರೆ ಸಾಕು. ಕ್ಯಾಮರಾ ಖರ್ಚಿನಲ್ಲಿ ೫,೦೦೦ ರೂಪಾಯಿವರೆಗೆ ಸಬ್ಸಿಡಿಯಾಗಿ ಸರಕಾರ ನೀಡುವುದೆಂದೂ ಸಚಿವ ತಿಳಿಸಿದ್ದಾರೆ.

ಚರ್ಚೆಯಲ್ಲಿ ಸಚಿವರ ಹೊರತು ಟ್ರಾನ್ಸ್‌ಪೋರ್ಟ್ ಕಮಿಶನರ್ ಎಸ್. ಶ್ರೀಜಿತ್, ಅಸಿಸ್ಟೆಂಟ್ ಸೆಕ್ರೆಟರಿ ಅಜಿತ್ ಕುಮಾರ್, ಜೋಯಿಂಟ್ ಟ್ರನ್ಸ್‌ಪೋರ್ಟ್ ಕಮಿಶನರ್ ಮನೋಜ್ ಕುಮಾರ್ ಹಾಗೂ ಬಸ್ ಮಾಲಕರ ಸಂಯುಕ್ತ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page