ಕಾಸರಗೋಡು: ಕಾಸರಗೋಡು ನಗರದ ಕರಂದಕ್ಕಾಡಿನ ಮಧೂರು ರಸ್ತೆ ತಿರುವಿನ ಬಳಿಯಿರುವ ಖಾಸಗಿ ಹಿತ್ತಿಲ ಪೊದೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ನಿನ್ನೆ ಪತ್ತೆಯಾಗಿದೆ. ಮೃತ ವ್ಯಕ್ತಿಗೆ ಸುಮಾರು ೫೫ ವರ್ಷ ಪ್ರಾಯ ಅಂದಾಜಿಸಲಾಗಿದೆ. ಮೃತರು ಗುಜರಿ ಸಾಮಗ್ರಿಗಳನ್ನು ಹೆಕ್ಕುವ ವ್ಯಕ್ತಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಪೊಲೀಸರು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದರು. ಸಾವಿಗೆ ಕಾರಣವೇನೆಂದು ತಿಳಿಯಬೇಕಾದರೆ ಮರಣೋತ್ತರ ಪರೀಕ್ಷೆ ನಡೆಸಬೇಕಾಗಿದೆ. ಸಂಬಂಧಿಕರು ತಲುಪಿದ ಬಳಿಕವೇ ಮರಣೋತ್ತರ ಪರೀಕ್ಷೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
