ಅಪರಿಚಿತ ವ್ಯಕ್ತಿ ರೈಲು ಢಿಕ್ಕಿ ಹೊಡೆದು ಮೃತ್ಯು

ಕಾಸರಗೋಡು: ಚಂದೇರ ಹಾಗೂ ಚೆರುವತ್ತೂರು ರೈಲ್ವೇ ನಿಲ್ದಾಣಗಳ ಮಧ್ಯೆ ಪಿಲಿಕ್ಕೋಡು ಕೊಲ್ಲರೋಡಿ ರೈಲು ಹಳಿ ಸಮೀಪ ಅಪರಿಚಿತ ವ್ಯಕ್ತಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನಿನ್ನೆ ರಾತ್ರಿ 8 ಗಂಟೆ ವೇಳೆ ಮೃತದೇಹ ಪತ್ತೆಯಾಗಿದೆ. ಮೃತದೇಹ ಗುರುತು ಪತ್ತೆಹಚ್ಚಲಾಗದಷ್ಟು ಛಿದ್ರಗೊಂಡಿದೆ.  ಮೃತ ವ್ಯಕ್ತಿ ಪುರುಷನಾಗಿದ್ದು, 60 ವರ್ಷ ಪ್ರಾಯ  ಅಂದಾಜಿಸಲಾಗಿದೆ. ಮೃತದೇಹವನ್ನು ಪೊಲೀಸರು ಪರಿಯಾರಂನ ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page