ಅಬಕಾರಿ ತಪಾಸಣೆ ವೇಳೆ ನಿಲ್ಲಿಸದೆ ಪರಾರಿಯಾಗಿ ಅಪಘಾತಕ್ಕೀಡಾದ ಕಾರಿನಿಂದ ಚಿನ್ನ, ಬೆಳ್ಳಿ, ಮಾರಕಾಯುಧ ಪತ್ತೆ: ಇಬ್ಬರು ಪರಾರಿ

ಆದೂರು: ಆದೂರು ಅಬಕಾರಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ತಂಡ ವಾಹನ ತಪಾಸಣೆಯಲ್ಲಿ ತೊಡಗಿದಾಗ ಆ ದಾರಿಯಾಗಿ ಬಂದ ಕಾರನ್ನು ಪರಿಶೀ ಲನೆಗಾಗಿ ತಡೆದು ನಿಲ್ಲಿಸಲೆತ್ನಿಸಿದ ವೇಳೆ ಅದು ನಿಲ್ಲದೆ ಪರಾರಿಯಾಗಿ ಬಳಿಕ ಅಪ ಘಾತಕ್ಕೊಳಗಾಗಿ ಅದರಲ್ಲಿ ಚಿನ್ನ, ಬೆಳ್ಳಿ ಹಾಗೂ ಮಾರಕಾಯುಧಗಳು ಪತ್ತೆಯಾ ದ ಘಟನೆ ಇಂದು ಮುಂಜಾನೆ ನಡೆದಿದೆ.
ಆದೂರು ಅಬಕಾರಿ ತಪಾಸಣಾ ಕೇಂದ್ರದಲ್ಲಿ ಕೇರಳ ಎಕ್ಸೈಸ್ ಮೊಬೈಲ್ ಇಂಟರ್ವೆನ್ಶನ್ ಯೂನಿಟ್ (ಕೆಮು) ಘಟಕದ ಪ್ರಿವೆಂಟಿವ್ ಆಫೀಸರ್ ಎ.ಬಿ. ಅಬ್ದುಲ್ಲರ ನೇತೃತ್ವದ ಅಬಕಾರಿ ತಂಡ ಇಂದು ಮುಂಜಾನೆ ಸುಮಾರು 1 ಗಂಟೆಯ ವೇಳೆ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಬಂದ ಕಾರೊಂದನ್ನು ತಪಾಸಣೆಗಾಗಿ ತಡೆದು ನಿಲ್ಲಿಸಲೆತ್ನಿಸಿದ ವೇಳೆ ಆ ಕಾರು ನಿಲ್ಲದೆ ಪರಾರಿಯಾಗಿದೆ. ತಕ್ಷಣ ಅಬಕಾರಿ ತಂಡದವರು ತಮ್ಮ ವಾಹನದಲ್ಲಿ ಆ ಕಾರನ್ನು ಹಿಂಬಾಲಿಸಿದಾಗ ಮುಳ್ಳೇರಿಯ- ಬದಿಯಡ್ಕ ರಸ್ತೆಯ ಕಾಂಕ್ರೀಟ್ ಗೋಡೆಗೆ ಕಾರು ಢಿಕ್ಕಿ ಹೊಡೆದಿದೆ. ತಕ್ಷಣ ಅಬಕಾರಿ ತಂಡದವರು ಆ ಕಾರನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ 140.6 ಗ್ರಾಂ ಚಿನ್ನ, 339.2 ಗ್ರಾಂ ಬೆಳ್ಳಿ, 101700 ನಗದು, ನಾಲ್ಕು ಮೊಬೈಲ್ ಫೋನ್ಗಳು, ಎರಡು ಸುತ್ತಿಗೆಗಳು, ಬೀಗಗಳು ಇತ್ಯಾದಿ ಪತ್ತೆಯಾಗಿವೆ. ಇವು ಕದ್ದ ಮಾಲುಗಳಾಗಿವೆ ಎಂಬ ಸಂಶಯ ದಿಂದ ಆ ಕಾರು ಮತ್ತು ಮಾಲುಗಳನ್ನು ಅಬಕಾರಿ ಕೆಮು ತಂಡದವರು ಬಳಿಕ ಆದೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ಆ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ಗಳಾದ ರಾಜೇಶ್, ಮೊಹಮ್ಮದ್ ಕಬೀರ್ ಬಿ.ಎಸ್ ಎಂಬವರು ಒಳಗೊಂಡಿದ್ದರು. ಕಾಸರಗೋಡು ಅಸಿಸ್ಟೆಂಟ್ ಎಕ್ಸೈಸ್ ಆಯುಕ್ತರು ನೀಡಿದ ನಿರ್ದೇಶದಂತೆ ಸ್ಕ್ವಾಡ್ನ ಪ್ರಿವೆಂಟಿವ್ ಆಫೀಸರ್ ಅಜೀಶ್ ತಕ್ಷಣ ಸ್ಥಳಕ್ಕೆ ಆಗಮಿಸಿ ಅಗತ್ಯದ ಪರಿಶೀಲನೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಬದಿಯಡ್ಕ ರೇಂಜ್ ಎಕ್ಸೈಸ್ ಇನ್ಸ್ಪೆಕ್ಟರ್, ಇತರ ಸಿಬ್ಬಂದಿ ಗಳಾದ ಅಲೋಕ್ ಗುಪ್ತಾ ಮತ್ತು ಲಿಜಿನ್ ಎಂಬವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಕಾರಿನಲ್ಲಿದ್ದ ಸಾಮಗ್ರಿಗಳು ಕರ್ನಾಟಕದ ಎಲ್ಲಿಂ ದಲೋ ಕಳವುಗೈಯ್ಯಲಾದ ಮಾಲುಗ ಳಾಗಿವೆ ಎಂದು ಸಂಶಯಿಸಲಾಗುತ್ತಿದೆ. ಆ ಕಾರಿಗೆ ಲಗತ್ತಿಸಲಾಗಿದ್ದ ನಂಬ್ರ ಪ್ಲೇಟ್ ಕೂಡಾ ನಕಲಿಯಾಗಿರಬಹು ದೆಂಬ ಶಂಕೆಯನ್ನೂ ಅಬಕಾರಿ ತಂಡ ವ್ಯಕ್ತಪಡಿಸಿದೆ. ಅಪಘಾತಕ್ಕೀಡಾದ ವೇಳೆ ಆ ಕಾರಿನಲ್ಲಿದ್ದ ಇಬ್ಬರು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆಂದೂ, ಅವರ ಪತ್ತೆಗಾ ಗಿರುವ ಶೋಧ ಕಾರ್ಯಾಚರಣೆಯನ್ನು ಆದೂರು ಪೊಲೀಸರು ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page