ಅಬಕಾರಿ ಪ್ರಕರಣ ಪರಾರಿಯಾಗಿದ್ದ ಆರೋಪಿ ಸೆರೆ
ಕಾಸರಗೋಡು: ಅಬಕಾರಿ ಪ್ರಕರಣದಲ್ಲಿ ಆರೋಪಿಯನ್ನು ಕಾಸರಗೋಡು ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ ಯವರ ನೇತೃತ್ವದ ಅಬಕಾರಿ ತಂಡ ಬಂಧಿಸಿದೆ. ಅಪ್ಪುಟ್ಟ ಅಲಿಯಾಸ್ ಸಂಜಯ್ ಕುಮಾರ್ ಬಂಧಿತ ಆರೋಪಿ. ಕಳೆದ ವರ್ಷ ಅಕ್ಟೋಬರ್ ೧೬ರಂದು ಅಬಕಾರಿ ತಂಡ ಅಡ್ಕತ್ತಬೈಲಿನಲ್ಲಿ ನಡೆಸಿದ ಕಾರ್ಯಾ ಚರಣೆಯಲ್ಲಿ ಸ್ಕೂಟರ್‌ನಲ್ಲಿ ಸಾಗಿಸಲಾಗುತ್ತಿದ್ದ 12.96 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಿಕೊಂಡಿತ್ತು. ಪ್ರಸ್ತುತ ಪ್ರಕರಣದ ಆರೋಪಿಯಾಗಿರುವ ಸಂಜಯ್ ಕುಮಾರ್ ಆ ವೇಳೆ ತಪ್ಪಿಸಿಕೊಂಡಿದ್ದನು. ನಿನ್ನೆ ಆತನನ್ನು ಬಂಧಿಸಲಾಗಿದೆ. ಆತನನ್ನು ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.