ಅಮೀಬಿಕ್ ಮೆದುಳು ಜ್ವರ: ಜಾಗ್ರತೆ ಪಾಲಿಸಲು ಆರೋಗ್ಯ ಇಲಾಖೆ ಕರೆ


ತಿರುವನಂತಪುರ: ಬೇಸಿಗೆಕಾಲವಾದುದರಿಂದ ಅಮೀಬಿಕ್ ಮೆದುಳು ಜ್ವರ ವಿರುದ್ಧ ಜಾಗ್ರತೆ ಪಾಲಿಸಬೇಕೆಂದು ಆರೋಗ್ಯ ಇಲಾಖೆ ನಿರ್ದೇಶಿಸಿವೆ. ಬೇಸಿಗೆ ಕಾಲದಲ್ಲಿ ಜಲಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಕೆಸರಿನಲ್ಲಿ ಅಮೀಬದ ಸಂಪರ್ಕ ಹೆಚ್ಚಿರಲು ಸಾಧ್ಯತೆಯಿದೆ. ಆದ್ದರಿಂದ ಕೆರೆಗಳ ಸಹಿತ ಜಲಾಶಯಗಳಲ್ಲಿ ಸ್ನಾನ ಮಾಡುವವರು ಜಾಗ್ರತರಾಗಿರಬೇಕು. ನೀರಿನ ಟ್ಯಾಂಕ್ಗಳಲ್ಲಿ ಕೆಸರು ಕಟ್ಟಿ ನಿಲ್ಲದಂತೆ ನೋಡಿಕೊಂಡು ಶುಚಿಯಾಗಿಡಬೇಕು. ಈಜುಕೊಳಗಳು, ಅಮ್ಯೂಸ್ಮೆಂಟ್ ಪಾರ್ಕ್ಗಳ ನೀರನ್ನು ಕ್ಲೋರಿನೇಟ್ ನಡೆಸಬೇಕು. ಕಲುಷಿತ ನೀರಿನೊಂದಿಗೆ ಯಾವುದಾದರೂ ರೀತಿಯಲ್ಲಿ ಸಂಪರ್ಕವುಳ್ಳವರಿಗೆ ಅಸಹನೀಯ ತಲೆನೋವು, ಜ್ವರ, ವಾಂತಿ, ಕುತ್ತಿಗೆ ತಿರುಗಲು ತೊಂದರೆ ಅನುಭವಗೊಳ್ಳಲಿದೆ. ಈ ಲಕ್ಷಣಗಳು ಕಂಡುಬAದಲ್ಲಿ ಶೀಘ್ರ ಚಿಕಿತ್ಸೆ ಪಡೆಯಬೇಕೆಂದೂ ತಿಳಿಸಲಾಗಿದೆ. ರಾಜ್ಯದಲ್ಲಿ ಈಗಲೂ ಅಮೀಬಿಕ್ ಮೆದುಳು ಜ್ವರ ವರದಿಯಾಗುತ್ತಿದೆ. 2024ರಲ್ಲಿ 38 ಮಂದಿಗೆ ರೋಗ ಬಾಧಿಸಿದ್ದು 8 ಮಂದಿ ಸಾವಿಗೀಡಾಗಿದ್ದಾರೆ. 2025ರಲ್ಲಿ 12 ಮಂದಿಗೆ ರೋಗ ಬಾಧಿಸಿ 5 ಮಂದಿಗೆ ಸಾವು ಸಂಭವಿಸಿದೆ.

You cannot copy contents of this page